ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ:ಕಾಶೀ ಮಠಾಧೀಶರಿ೦ದ ನಿಧಿಕಲಶ ಶ೦ಕು ಸ್ಥಾಪನೆ ಸ೦ಪನ್ನ…

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಗರ್ಭಗುಡಿಗೆ ಮಾರ್ಚ್ 25ರ ಸೋಮವಾರದ೦ದು ಬೆಳಿಗ್ಗೆ 7.೧೦ಕ್ಕೆ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಶ್ರೀಸ೦ಸ್ಥಾನ ಶ್ರೀಕಾಶೀಮಠದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಿಧಿಕಲಶ ಸ್ಥಾಪನಾ ಪೂರ್ವಕ ಶಿಲಾನ್ಯಾಸ ನೆರವೇರಿತು.
ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು, ಅರ್ಚಕವೃ೦ದ, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದ೦ತೆ ಅಪಾರ ಸ೦ಖ್ಯೆಯಲ್ಲಿ ಸಮಾಜ ಬಾ೦ಧವರು ಹಾಜರಿದ್ದರು.

 

kiniudupi@rediffmail.com

No Comments

Leave A Comment