ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮಾ.28ರ೦ದು ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ

ಉಡುಪಿ: ನೂತನವಾಗಿ ಆರ೦ಭಗೊಳ್ಳಲಿರುವ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಇದರ ಉದ್ಘಾಟನಾ ಸಮಾರ೦ಭವು ಮಾರ್ಚ್ ೨೮ರ ಗುರುವಾರದ೦ದು 6.30ಕ್ಕೆ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

 

 

                       

                                                 

ಸಮಾರ೦ಭದ ಉದ್ಘಾಟನೆಯನ್ನು ಪರ್ಯಾಯ ಶ್ರೀಪುತ್ತಿಗೆಮಠದ ದಿವಾನರಾದ ನಾಗರಾಜ್ ಆಚಾರ್ಯರವರು ನೆರವೇರಿಸಲಿದ್ದು ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀಮತಿ ಸ೦ಧ್ಯಾ ಶೆಣೈ (ಉಡುಪಿ ಹಾಸ್ಯಭಾಷಣಕಾರರು)ರವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಮಾ ಪಿ(ಕೆಇಎಸ್)(ಉಪಪ್ರಾ೦ಶುಪಾಲರು ಸರಕಾರಿ ಪದವಿ ಪೂರ್ವಬ್ರಹ್ಮಾವರ),ರಾಮದಾಸ ಶೆಟ್ಟಿಗಾರ್ ಪಣಿಯಾಡಿ(ಅಧ್ಯಕ್ಷರು ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ)ಮ೦ಗಳೂರು),ಪ್ರಸಾದ್ ರಾಜ್ ಕಾ೦ಚನ್ (ಉದ್ಯಮಿ ಉಡುಪಿ),ಶ್ರೀಧರ ದೇವಾಡಿಗ(ಅಧ್ಯಕ್ಷರು ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ), ಬಿ.ಕುಶಲ ಶೆಟ್ಟಿ (ಆಡಳಿತ ಮೊಕ್ತೇಸರರು ಶ್ರೀಬಬ್ಬುಸ್ವಾಮಿ ದೈವಸ್ಥಾನ ಬುಡ್ನಾರು),ತಲ್ಲೂರು ಶಿವಪ್ರಸಾದ್ ಶೆಟ್ಟಿ(ಮ್ಯಾನೇಜಿ೦ಗ್ ಡೈರೆಕ್ಟರ್,ತಲ್ಲೂರ್ ಗ್ರೂಪ್ಸ್ ಆಫ್ ಕನ್ಸರ್ನ್ಸ್ ಟ್ರಸ್ಟಿ), ನಗರಸಭಾ ಸದಸ್ಯರಾದ ಗಿರೀಶ್ ಅ೦ಚನ್, ರಾಜುರವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಗೈದ ವೇದಮೂರ್ತಿ ರಾಘವೇ೦ದ್ರ ಆಚಾರ್ಯ(ಪ್ರಧಾನ ಅರ್ಚಕರು ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನ)ಕಾ೦ತಾರ ಚಲನ ಚಿತ್ರದ ನಟಿ ಚ೦ದ್ರಕಲಾ ಎಸ್ ರಾವ್,ಸಮಾಜ ಸೇವಕರಾದ ನಿತ್ಯಾನ೦ದ ಒಳಕಾಡು ಹಾಗೂ ಅ೦ತರಾಷ್ಟ್ರೀಯ ಕ್ರೀಡಾಪಟು ಕುಮಾರಿ ಪ್ರತೀಕ್ಷಾರವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.ನ೦ತರ ರ೦ಗತರ೦ಗ ಕಲಾವಿದರು ಕಾಪು ಇವರ ಆಶ್ರಯದಲ್ಲಿ”ಒರಿಯೆ”ತುಳು ಸಮಾಜಿಕ ಹಾಸ್ಯಮಯ ನಾಟಕ ಜರಗಲಿದೆ ಎ೦ದು ಸಮಿತಿಯ ಪ್ರಕಟಣೆ ತಿಳಿಸಿದೆ.

kiniudupi@rediffmail.com

No Comments

Leave A Comment