ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ರಜತ ಕಲಶ ಮತ್ತು ಶಿಲಾನ್ಯಾಸದ ಶಿಲೆಗಳ ಭವ್ಯ ಮೆರವಣಿಗೆ ಸ೦ಪನ್ನ

ಉಡುಪಿ:ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ ಇದರ ನಿಧಿ ಕಲಶ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವಭಾವಿಯಾಗಿ ತಾ.24-03-2024 ನೇ ಆದಿತ್ಯವಾರ ಇ೦ದು ವಿಶೇಷ ಸಾಂಪ್ರದಾಯಿಕ ಕಾರ್ಯಕ್ರಮವನ್ನು ನಡೆಸಲಾಯಿತು.

ಸಂಜೆ 5.00 ಕ್ಕೆ ಶ್ರೀ ವೀರಭದ್ರ ದೇವಸ್ಥಾನ ಸಂತೆಕಟ್ಟೆಯಿಂದ ರಜತ ಕಲಶಗಳನ್ನು ಮತ್ತು ಶಿಲಾನ್ಯಾಸದ ಶಿಲೆಗಳನ್ನು ಭವ್ಯವಾದ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತರುವುದರೊ೦ದಿಗೆ ಸಂಜೆ 6.00ರಿ೦ದ 7.00 ಕ್ಕೆ ನೂತನ ಗರ್ಭಗುಡಿಯ ಪಂಚಾಂಗದ ಸುತ್ತಲೂ ಸಾಲು ಹಣತೆ ದ್ವೀಪ ಪ್ರಜ್ವಲನೆ ಹಾಗೂ ಭಜನ ಕಾರ್ಯಕ್ರಮವು ಜರಗಿತು.

7.00ಕ್ಕೆ: ಶ್ರೀ ದೇವರ ರಾತ್ರಿ ಪೂಜೆ ಮತ್ತು ಪ್ರಸಾದ ವಿತರಣೆಯ ಬಳಿಕ 7.30 ಕ್ಕೆ : ಭೋಜನ ಪ್ರಸಾದ ಕಾರ್ಯಕ್ರಮ ನಡೆಯಿತು.

ಮೆರವಣಿಗೆಯಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು,ಅರ್ಚಕವೃ೦ದ,ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದ೦ತೆ ಅಪಾರ ಸ೦ಖ್ಯೆಯಲ್ಲಿ ಸಮಾಜ ಬಾ೦ಧವರು ಹಾಜರಿದ್ದರು.

ಮಾರ್ಚ್ 25ರ ಸೋಮವಾರದ೦ದು ಬೆಳಿಗ್ಗೆ 7.೧೦ಕ್ಕೆ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಶ್ರೀಸ೦ಸ್ಥಾನ ಶ್ರೀಕಾಶೀಮಠದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಿಧಿ ಕಲಶ ಸ್ಥಾಪನಾ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮವು ಜರಗಲಿದೆ.

kiniudupi@rediffmail.com

No Comments

Leave A Comment