Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ವಿಕಸಿತ್ ಭಾರತ್ ಸಂಪರ್ಕ ವಾಟ್ಸಪ್ ಸಂದೇಶ ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸಿ-ಕೇಂದ್ರಕ್ಕೆ ಆಯೋಗ ಸೂಚನೆ

ನವದೆಹಲಿ:ಮಾ, 22:ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ವಿಕಸಿತ್ ಭಾರತ್ ಸಂಪರ್ಕ ವಾಟ್ಸಪ್ ಸಂದೇಶ ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ವಿಕಸಿತ್ ಭಾರತ್ ಹೆಸರಿನ ಸಂದೇಶದಲ್ಲಿ ಕೇಂದ್ರದ ಬೃಹತ್ ಯೋಜನೆಗಳನ್ನು ಪ್ರಚಾರ ಮಾಡುತ್ತಿರುವುದಾಗಿ ಚುನಾವಣಾ ಆಯೋಗ ದೂರನ್ನು ಸ್ವೀಕರಿಸಿದ ಬಳಿಕ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.

ಚುನಾವಣೆ ಸಂದರ್ಭದಲ್ಲಿ ಕಾನೂನು ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಆಯೋಗ ಸರಣಿ ಸಭೆ ನಡೆಸುವ ಮೂಲಕ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ವಿವರಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವಾಲಯ, ವಿಕಸಿತ್ ಭಾರತ್ ಸಂಪರ್ಕ್‌ ಸಂದೇಶವನ್ನು ದೇಶಾದ್ಯಂತ ನೀತಿ ಸಂಹಿತೆ (ಮಾರ್ಚ್‌16) ಜಾರಿಯಾಗುವ ಮೊದಲು ಕಳುಹಿಸಲಾಗಿತ್ತು ಎಂದು ಆಯೋಗಕ್ಕೆ ಸ್ಪಷ್ಟನೆ ನೀಡಿದೆ.

No Comments

Leave A Comment