Log In
BREAKING NEWS >
'ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ ಮರಳಿ ತರಲಿದೆ'- ನಿರ್ಮಲಾ ಸೀತಾರಾಮನ್....ಪಿಸ್ತೂಲ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ಪ್ರಕರಣ; ಪಿಎಸ್​ಐ ಸೇರಿ ನಾಲ್ವರು ಸಸ್ಪೆಂಡ್....

ಸೌದಿ ಅರೇಬಿಯದ ತಾಯಿಫ್ ಬಳಿ ಭೀಕರ ಕಾರು ಅಪಘಾತ: ಹಳೆಯಂಗಡಿ ಮೂಲದ ನಾಲ್ವರು ದುರ್ಮರಣ

ಮ೦ಗಳೂರು:ಸೌದಿ ಅರೇಬಿಯಾದ ತಾಯಿಫ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಹಳೆಯಂಗಡಿ ಮೂಲದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಹಳೆಯಂಗಡಿ ಮೂಲದ ದಂಪತಿಗಳು ಹಾಗೂ ನಲ್ವತು ದಿನದ ಹಸುಗೂಸು ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ಕಾರಿನಲ್ಲಿದ್ದ ಇನ್ನೊಂದು ಮಗು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕತಾರ್‌ನಿಂದ ಸೌದಿ ಅರೇಬಿಯಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ಮಗುವಿನೊಂದಿಗೆ ದಂಪತಿ ತೆರಳುತ್ತಿದ್ದಾಗ ಗುರುವಾರ ಮುಂಜಾನೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತರು ಮಕ್ಕಾ ಡಿಕೆಎಸ್ಸಿಸಿ ಮುಖಂಡ ಇಬ್ರಾಹಿಂ ಕನ್ನಂಗಾರ್ ಅವರ ಸಂಬಂಧಿಕರೆಂದು ತಿಳಿದುಬಂದಿದ್ದು. ಹಳೆಯಂಗಡಿ ತೋಕೂರು ಸರಕಾರಿ ಶಾಲೆಯ ಪಕ್ಕದ ಕುಟುಂಬದ ಮೂಲ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ. ಅಪಘಾತಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

No Comments

Leave A Comment