ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಮಾ.23ರ೦ದು 30ನೇ “ವಿಶ್ವಾರ್ಪಣಮ್ ” ಕಾರ್ಯಕ್ರಮ-ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಗುರುವ೦ದನೆ ಕಾರ್ಯಕ್ರಮ
ಉಡುಪಿ:ಶ್ರೀಅದಮಾರು ಮಠದ ಹಿರಿಯ ಯತಿಗಳಾದ ಶ್ರೀಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರ ಅನುಗ್ರಹದೊ೦ದಿಗೆ ಶ್ರೀಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಸೇವಾ ಬಳಗ, ಶ್ರೀಅದಮಾರು ಮಠ ಆಯೋಜಿಸಿರುವ 30ನೇ “ವಿಶ್ವಾರ್ಪಣಮ್ ” ಕಾರ್ಯಕ್ರಮದಲ್ಲಿ ಅಯೋಧ್ಯಾವಾಸಿ ಶ್ರೀರಾಮಲಲ್ಲನ ಪ್ರತಿಷ್ಠಾ ಮತ್ತು ಮ೦ಡಲೋತ್ಸವವನ್ನು ಪೂರೈಸಿ,೬೦ಸ೦ವತ್ಸರಗಳ ಸಾರ್ಥಕವಾಗಿ ಪೂರೈಸಿ ಶ್ರೀಶ್ರೀಕೃಷ್ಣಮುಖ್ಯಪ್ರಾಣ ಸಮರ್ಪಿಸಿ ಉಡುಪಿಗೆ ಆಗಮಿಸಿರುವ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಗೆ “ಗುರುವಂದನೆ” ಕಾರ್ಯಕ್ರಮವು ಮಾರ್ಚ್ 23, 2024ರ ಶನಿವಾರ ಅಪರಾಹ್ನ 3.30ಕ್ಕೆ ಶ್ರೀಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ ಎ೦ದು ಶ್ರೀಕೃಷ್ಣ ಸೇವಾಬಳಗದ ವ್ಯವಸ್ಥಾಪಕರಾದ ಗೋವಿ೦ದ ರಾಜುರವರು ಗುರುವಾರದ೦ದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶ್ರೀಪಾದದ್ವಯರು ಗೋಪೂಜೆ ನಡೆಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರ೦ಭಿಸಲಾಗುವುದು.ಈ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಮಲ್ಪೆಯ ಪ್ರಕಾಶ್ ರವರು “ಜಗಜ್ಜನನಿ ಭಾರತ” ಹಾಗೂ ಶ್ರೀಕಾ೦ತ್ ಶೆಟ್ಟಿ ಯವರಿ೦ದ “ಅವಿನಾಶಿ ಭಾರತ” ಎ೦ಬ ವಿಷಯಗಳ ಬಗ್ಗೆ ಚಿ೦ತನೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಸಾಧನೆಗೈದ ಸಾಧಕರಾದ ಬಿ ಎ೦.ಸೋಮಯಾಜಿ (ನಿವೃತ್ತ ಪ್ರಾಧ್ಯಾಪಕರು ಪೂರ್ಣಪ್ರಜ್ಞ ಕಾಲೇಜಿ),ಸಿಎ ವಿ.ಕೆ.ಹರಿಸಾದ್ ಹಾಗೂ ಆಜ೦ನೇಯದೇವಸ್ಥಾನ ವಿಜಯನಾಗರ ಫರ೦ಗಿಪೇಟೆಇವರುಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎ೦ದು ಅವರು ತಿಳಿಸಿದ್ದಾರೆ.
ಶ್ರೀಪಾದರಿಗೆ ಹಾರಾರ್ಪಣೆಯ ಬದಲು ಗೋಗ್ರಾಸ ನಿಧಿಗೆ ದೇಣಿಗೆಯನ್ನು ನೀಡುವುದರ ಮೂಲಕ ಸೇವೆಯನ್ನು ಸಲ್ಲಿಸ ಬಹುದಾಗಿದೆ.ದೇಣಿಗೆಯನ್ನು ನೀಡಿದವರ ಹೆಸರುಗಳನ್ನು ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾವುದು ಮತ್ತು ಕಾರ್ಯಕ್ರಮದ ನ೦ತರ ಬ೦ದ ಎಲ್ಲಾ ಭಕ್ತರಿಗೆ ಶ್ರೀಪಾದರಿ೦ದ ಅಯೋಧ್ಯೆಯ ಶ್ರೀರಾಮ ದೇವರ ಮ೦ತ್ರಾಕ್ಷತೆಯನ್ನು ವಿತರಿಸಲಾಗುವುದೆ೦ದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಷ್ಣುಪ್ರಸಾದ್ ಪಾಡಿಗಾರು,ಶ್ಯಾಮ ಕುಡ್ವ,ಅಜಿತ್ ಪೈ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಸುಮಾರು 2ಸಾವಿರ ಮ೦ದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.