6,10,000 ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಒಟ್ಟು 27,62,47,214 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯಪುರ ಸಂಸದೀಯ ಕ್ಷೇತ್ರದಲ್ಲಿ 2,93,50,000 ರೂ.ನಗದನ್ನು ವಿಜಯಪುರ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸ್ ಠಾಣೆ ತಂಡ ಮತ್ತು ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನಲ್ಲಿ ಎಸ್‌ಎಸ್‌ಟಿ ತಂಡ 32,92,500 ರೂ. ಹಾಗೂ ಬನ್ನಿಕೊಪ್ಪ ಚೆಕ್ ಪೋಸ್ಟ್, ಯಲಬುರ್ಗಾ ತಾಲ್ಲೂಕು, ಕೊಪ್ಪಳದಲ್ಲಿ 50,00,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಾವಲು ಪಡೆಯಲ್ಲಿ 10 ವಾಹನಗಳು
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಒಂದೇ ಬಾರಿಗೆ 10ಕ್ಕಿಂತ ಹೆಚ್ಚು ವಾಹನಗಳನ್ನು ರಾಜಕೀಯ ರ್ಯಾಲಿಗೆ ಬಳಸುತ್ತಿರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಆರ್. ತಿಳಿಸಿದ್ದಾರೆ.
ಒಂದು ಬೆಂಗಾವಲು ಪಡೆಯಲ್ಲಿ ಕೇವಲ 10 ವಾಹನಗಳು ಮಾತ್ರ ಚಲಿಸಬಹುದು ಮತ್ತು ಎರಡು ಬೆಂಗಾವಲು ಪಡೆಗಳ ನಡುವೆ ಕನಿಷ್ಠ 100 ಮೀಟರ್ ಅಂತರವಿರಬೇಕು. ಅಲ್ಲದೆ, ಪ್ರಚಾರದ ಸಮಯದಲ್ಲಿ ಒಂದು ವಾಹನದಲ್ಲಿ ಮಾತ್ರ ಧ್ವಜ ಅಳವಡಿಕೆಗೆ ಅವಕಾಶ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸುಮಾರು 80 ವಾಹನಗಳನ್ನು ಬೆಂಗಾವಲು ಪಡೆಯಲ್ಲಿ ಬಳಸಿದ್ದಕ್ಕಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದರು.
ಪರ್ಯಾಯ ದಾಖಲೆಗಳು
ಎಲ್ಲಾ ಮತದಾರರು ಮತದಾನದ ಮೊದಲು ಮತದಾನ ಕೇಂದ್ರಗಳಲ್ಲಿ ತಮ್ಮ ಗುರುತಿಗಾಗಿ EPIC ಅನ್ನು ಹಾಜರುಪಡಿಸುವ ನಿರೀಕ್ಷೆಯಿದೆ. EPIC ಅನ್ನು ಪಡೆಯಲು ಸಾಧ್ಯವಾಗದ ಮತದಾರರು ಈ ಕೆಳಗಿನ ಯಾವುದಾದರೊಂದು ಪರ್ಯಾಯ ಫೋಟೋ ಗುರುತಿನ ದಾಖಲೆಗಳನ್ನು ಒದಗಿಸಬೇಕು. ಆಧಾರ್ ಕಾರ್ಡ್, MGNREGA ಜಾಬ್ ಕಾರ್ಡ್, ಬ್ಯಾಂಕ್‌ಗಳು/ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್‌ಬುಕ್‌ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಇತ್ಯಾದಿ.