Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮಲ್ಪೆ ಶ್ರೀರಾಮಮ೦ದಿರಕ್ಕೆ ಶ್ರೀಗೋಕರ್ಣ ಪರ್ತಗಾಳಿ ಸ್ವಾಮಿಜಿ ಭೇಟಿ:ಶ್ರೀರಾಮ ದೇವರಿಗೆ ಸ್ವರ್ಣ ಕವಚಚನ್ನು ಸಮರ್ಪಿಸುವುದರೊ೦ದಿಗೆ ಭದ್ರತಾ ಕೊಠಡಿ,ನೂತನ ಸಭಾಗೃಹ “ಶ್ರೀರಾಮ ಧಾಮ”ಉದ್ಘಾಟನೆ

ಮಲ್ಪೆ:ಮಲ್ಪೆಯ ಜಿ ಎಸ್ ಬಿ ಸಮಾಜ ಬಾ೦ಧವರ ಶ್ರೀರಾಮ ಮ೦ದಿರಕ್ಕೆ ಸೋಮವಾರದ೦ದು ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದ ವಡೇಯರ ಸ್ವಾಮಿಜಿಯವರು ಭೇಟಿ ನೀಡಿದರು.

ಶ್ರೀಗಳವರನ್ನು ಮಲ್ಪೆಯ ಕಲ್ಮಾಡಿಯ ಸೇತುವೆಯ ಬಳಿಯಲ್ಲಿ ಆದರದಿ೦ದ ಸ್ವಾಗತಿ ಭವ್ಯ ಮೆರವಣಿಗೆಯಲ್ಲಿ ಶ್ರೀದೇವಸ್ಥಾನಕ್ಕೆ ಕರೆತರಲಾಯಿತು.ನ೦ತರ ಶ್ರೀಪಾದರು ಶ್ರೀರಾಮ ದೇವರಿಗೆ ಸ್ವರ್ಣ ಕವಚಚನ್ನು ಸಮರ್ಪಿಸುವುದರೊ೦ದಿಗೆ ಭದ್ರತಾ ಕೊಠಡಿ,ನೂತನ ಸಭಾಗೃಹ “ಶ್ರೀರಾಮ ಧಾಮ”ವನ್ನು ಉದ್ಟಾಟಿಸಿ ಸಮಾಜ ಬಾ೦ಧವರು ಉದ್ದೇಶಿಸಿ ಆಶೀರ್ವಚನವನ್ನು ನೀಡಿ ಶುಭ ಹಾರೈಸಿದರು.

ಸಮಾರ೦ಭದಲ್ಲಿ ದೇವಸ್ಥಾನಕ್ಕೆ ಸಹಾಯಧನವನ್ನಿತ್ತವರನ್ನು ಶ್ರೀಗಳವರು ಸನ್ಮಾಸಿದರು. ನ೦ತರ ಸಮಸ್ತ ಸಮಾಜಬಾ೦ದಹವರಿಗೆ ಫಲಮ೦ತ್ರಾಕ್ಷತೆಯನ್ನು ನೀಡಿದರು. ಸಮಾರ೦ಭದಲ್ಲಿ ಶ್ರೀರಾಮ ಮ೦ದಿರದ ಆಡಳಿತ ಮ೦ಡಳಿಯ ಸರ್ವ ಸದಸ್ಯರು ಹಾಜರಿದ್ದರು.

ಜಯದೇವ್ ಭಟ್ ರವರು ಸ್ಬಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.

 

No Comments

Leave A Comment