ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

40 ಗಂಟೆಗಳ ಕಾಲ ಹೋರಾಡಿ Somali pirates ಹೆಡೆಮುರಿ ಕಟ್ಟಿದ ಭಾರತೀಯ ನೌಕಾಪಡೆ, 17 ಮಂದಿ ರಕ್ಷಣೆ, 35 ಕಡಲ್ಗಳ್ಳರ ಬಂಧನ

ನವದೆಹಲಿ: ಸಮುದ್ರ ಪ್ರದೇಶದಲ್ಲಿ ಸರಕು ಸಾಗಾಣಿಕಾ ಹಡಗೊಂದರ ಮೇಲೆ ದಾಳಿ ಮಾಡಿ ಅದರಲ್ಲಿನ 17 ಮಂದಿ ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಸೊಮಾಲಿಯಾ ಕಡಲ್ಗಳ್ಳರ ವಿರುದ್ಧ ಸತತ 40 ಗಂಟೆಗಳ ಕಾಲ ಹೋರಾಡಿ 35 ಮಂದಿ ಕಡಲ್ಗಳ್ಳರನ್ನು ಭಾರತೀಯ ನೌಕಾಪಡೆ ಬಂಧಿಸಿದೆ.

ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ಮಧ್ಯೆ (Israel Palestine War) ಯುದ್ಧ ಶುರುವಾದ ಬಳಿಕ ಸಮುದ್ರ ಪ್ರದೇಶದಲ್ಲಿ ಕಡಲ್ಗಳ್ಳರ (Pirates) ಹಾವಳಿ ಹೆಚ್ಚಾಗಿದ್ದು, ಹಡಗುಗಳ ಹೈಜಾಕ್‌, ಸಿಬ್ಬಂದಿಗಳ ಒತ್ತೆಯಾಳಾಗಿರಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಅದೇ ರೀತಿ ಭಾರತದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರು ನೌಕೆಯೊಂದನ್ನು ಹೈಜಾಕ್‌ ಮಾಡಿ, ತಮ್ಮ ರುಯೆನ್‌ ಹಡಗಿನಲ್ಲಿ 17 ಸಿಬ್ಬಂದಿಯನ್ನು ಬಂಧಿಸಿಟ್ಟಿದ್ದರು.

ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆ ಸತತ 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎಲ್ಲ 35 ಮಂದಿ ಕಡಲ್ಗಳ್ಳರು ಶರಣಾಗುವಂತೆ ಮಾಡಿದ್ದು ಮಾತ್ರವಲ್ಲದೇ ಎಲ್ಲ 17 ಮಂದಿ ಸಿಬ್ಬಂದಿಗಳನ್ನೂ ರಕ್ಷಣೆ ಮಾಡಿದೆ.

ಐಎನ್ಎಸ್ ಕೋಲ್ಕತಾ ಮೂಲಕ ಕಾರ್ಯಾಚರಣೆ

ಇದರ ಕುರಿತು ನಿಖರ ಮಾಹಿತಿ ಪಡೆದ ಭಾರತೀಯ ನೌಕಾಪಡೆಯು, ಐಎನ್‌ಎಸ್‌ ಕೋಲ್ಕೊತಾ ನೌಕೆಯ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಐಎನ್‌ಎಸ್‌ ಸುಭದ್ರ ನೌಕೆಯೂ ಐಎನ್‌ಎಸ್‌ ಕೋಲ್ಕೊತಾಗೆ ರಕ್ಷಣೆಯಲ್ಲಿ ನೆರವು ನೀಡಿದೆ. ಆ ಮೂಲಕ ಎಲ್ಲ 17 ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.

ನೌಕಾಪಡೆ ಮೂಲಗಳ ಪ್ರಕಾರ, ”ಅತ್ಯಾಧುನಿಕ ಡ್ರೋನ್‌ಗಳು, ಪಿ 81 ವಿಮಾನ ಹಾಗೂ ಸಿ 17 ವಿಮಾನಗಳನ್ನೂ ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಸಿ 17 ಯುದ್ಧವಿಮಾನದ ಮೂಲಕ ನೌಕೆಯ ಸಿಬ್ಬಂದಿಯನ್ನು ಏರ್‌ಲಿಫ್ಟ್‌ ಮಾಡಲಾಗಿದೆ. ಕಡಲ್ಗಳ್ಳರ ಬಳಿ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಹಾಗೂ ಮಾದಕವಸ್ತುವನ್ನು ಕೂಡ ನೌಕಾಪಡೆ ಅಧಿಕಾರಿಗಳು ಜಪ್ತಿ ಮಾಡಿದ್ದು, ಇವರು ಸೋಮಾಲಿಯಾದ ಕಡಲ್ಗಳ್ಳರು ಎಂದು ನೌಕಾಪಡೆ ಮಾಹಿತಿ ನೀಡಿದೆ.

No Comments

Leave A Comment