ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವ ಸ೦ಪನ್ನ
ಉಡುಪಿ:ಉಡುಪಿಯ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವವು ಮ೦ಗಳವಾರದ೦ದು ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪುತ್ತಿಗೆ ಕಿರೀಯ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸ೦ಪನ್ನ ಗೊ೦ಡಿತು.ಸಾವಿರಾರು ಮ೦ದಿ ಶ್ರೀದೇವರ ದರ್ಶನವನ್ನು ಪಡೆದು ಪುನೀತರಾದರು.
ಮಹಾರಾಷ್ಟ್ರ ಉಪಮುಖ್ಯ ಮಂತ್ರಿ ಯಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ
ಶ್ರೀ ಪುತ್ತಿಗೆ ಶ್ರೀಗಳ ವಿಶ್ವ ಗೀತಾ ಪರ್ಯಾಯದ ಪವಿತ್ರ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞ ದಿಂದ ಪ್ರಭಾವಿತರಾಗಿ ದೀಕ್ಷೆ ಪಡೆದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳೂ ಹಾಲಿ ಉಪಮುಖ್ಯ ಮಂತ್ರಗಳೂ ಆದ ಶ್ರೀ ದೇವೇಂದ್ರ ಫಡ್ನವೀಸ್
ಇಂದು ಶ್ರೀ ಕೃಷ್ಣ ಮಠಕ್ಕೆ ಆಗಮಿಸಿಶ್ರೀ ಕೃಷ್ಣ ದರ್ಶನ , ಪರ್ಯಾಯ ಶ್ರೀಪಾದರಿಂದ ಅನುಗ್ರಹ ಮ೦ತ್ರಾಕ್ಷತೆಯನ್ನು ಪಡೆದರು.ಸ್ಥಳೀಯ ಶಾಸಕರುಗಳು ಈ ಸ೦ದರ್ಭದಲ್ಲಿ ಹಾಜರಿದ್ದರು.