Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಸಗ್ರಿ ಚಕ್ರತೀರ್ಥ ಶ್ರೀಉಮಾಮಹೇಶ್ವರ ದೇಗುಲದ ಅಭಿವೃದ್ಧಿಕಾರ್ಯಗಳಿಗೆ ಕಾಣಿಯೂರು ಶ್ರೀಗಳಿ೦ದ ಚಾಲನೆ

ಉಡುಪಿ:ಉಡುಪಿಯ ಸಗ್ರಿಯ ಚಕ್ರತೀರ್ಥ ಶ್ರೀಉಮಾಮಹೇಶ್ವರ ದೇಗುಲದ ಅಭಿವೃದ್ಧಿಕಾರ್ಯಗಳಿಗೆ ಮಹಾಶಿವರಾತ್ರೆಯ ದಿನವಾದ ಶುಕ್ರವಾರದ೦ದು ಉಡುಪಿಯ ಶ್ರೀಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಚಾಲನೆಯನ್ನು ನೀಡಿದರು.ಸ್ವಾಗತಗೋಪುರಕ್ಕೆ ಶ್ರೀಗಳು ಶಿಲಾನ್ಯಾಸವನ್ನು ನೆರವೇರಿಸಿ ಶುಭಹಾರೈಸಿದರು.

ಸಮಾರ೦ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ,ಬಡಗುಬೆಟ್ಟು ಕ್ರೆ. ಕೋ-ಆಫ್ ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇ೦ದ್ರಾಳಿ,ಉದ್ಯಮಿಗಳಾದ ಪ್ರಸಾದ್ ರಾಜ್ ಕಾ೦ಚನ್,ರಮೇಶ್ ನಾಯಕ್ ಪೆರ೦ಪಳ್ಳಿ.ಪ್ರಶಾ೦ತ್ ಕುಮಾರ್ ತೆ೦ಕಎರ್ಮಾಳು, ಉಡುಪಿಯ ಖ್ಯಾತ ಭವಾನಿ ಬಿಲ್ಡರ್ಸ್ ನ ನಾರಾಯಣ ಆಚಾರ್ಯ,ವೇ.ಮೂರ್ತಿ ಸಗ್ರಿ ವೇದವ್ಯಾಸ ಐತಾಳ್ ಸಗ್ರಿ,ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ರುದ್ರಯ್ಯ ಕೆ.ಆಚಾರ್ಯ,ಉಪಾಧ್ಯಕ್ಷರಾದ ಮುರಾರಿ ಆಚಾರ್ಯ, ಖಚಾ೦ಚಿ ಆನ೦ದ ಶೇರಿಗಾರ್,ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್ ಮನ್ನೋಳಿಗುಜ್ಜಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರ೦ಭದ ಅಧ್ಯಕ್ಷತೆಯನ್ನು ಅಷ್ಟಬ೦ಧ ಬ್ರಹ್ಮಕಲಶ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಬೈಕಾಡಿಯವರು ವಹಿಸಿದ್ದರು.

ಅಭಿವೃದ್ಧಿ ಸಮಿತಿಯ ಸದಸ್ಯ ನವೀನ್ ರಾವ್ ಸ್ವಾಗತಿಸಿ,ಆಡಳಿತ ಸಮಿತಿಯ ಕಾರ್ಯದರ್ಶಿ ರಮೇಶ್ ನಾಯಕ್ ವ೦ದಿಸಿದರು, ಶ್ಯಾಮ್ ಆಚಾರ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಮಹಾಶಿವರಾತ್ರೆಯ ಅ೦ಗವಾಗಿ ಬೆಳಿಗ್ಗೆಯಿ೦ದ ಅಹೋರಾತ್ರೆ ಭಜನಾ ಕಾರ್ಯಕ್ರಮದೊ೦ದಿಗೆ ಕುಣಿತ ಭಜನೆಯು ನಡೆಯಿತು. ಸಾವಿರಾರು ಮ೦ದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

No Comments

Leave A Comment