ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಲ್ಪೆ: ಅಕ್ರಮ ಮರಳು ಸಾಗಾಟ : ಟಿಪ್ಪರ್ ಸಹಿತ ಓರ್ವ ವಶಕ್ಕೆ.
ಮಲ್ಪೆ: ಉಡುಪಿ ನಗರದ ಮಲ್ಪೆ ಸಮೀಪ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದರೆನ್ನಲಾದ ಖಚಿತ ಮಾಹಿತಿಯ ಮೇರೆಗೆ ವಾಹನ ತಪಾಸಣೆ ಮಾಡುತ್ತಿರುವ ವೇಳೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ಟಿಪ್ಪರ್ ಸಹಿತ ಮರಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ
ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ಚಾಲಕನನ್ನು ವಿಚಾರಿಸುತ್ತಿರುವಾಗ ದಿನೇಶ್ ಎಂಬ ವ್ಯಕ್ತಿ ಬಂದು ಈ ಮರಳನ್ನು ನಾನೇ ಸಾಗಾಟ ಮಾಡುತ್ತಿರುವುದು, ಸಾಗಾಟಕ್ಕೆ ಯಾವುದೆ ಅನುಮತಿ ಇಲ್ಲದಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.