ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀಶಿರೂರು ಮಠದ ಶ್ರೀ ವೇದವರ್ಧನ ತೀರ್ಥಶ್ರೀಪಾದರಿ೦ದ ಪಂಡರಾಪುರಕ್ಕೆ ಭೇಟಿ
ಉಡುಪಿ:ರುಕ್ಮಿಣಿ ಸತ್ಯಭಾಮೆ ಸಹಿತ ಪಾಂಡುರಂಗ ವಿಠಲನ ಆರಾಧಕರಾದ ಉಡುಪಿಯ ಶ್ರೀಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಪಂಡರಾಪುರ ಪಾಂಡುರಂಗ ವಿಠಲ ದೇವರ ದರ್ಶನ ಪಡೆದರು.
ಮಠದ ದಿವಾನರಾದ ಉದಯ ಸರಳತ್ತಾಯ ಶ್ರೀಶಭಟ್ ಕಡೆಕಾರು ಮೊದಲಾದವರು ಶ್ರೀಗಳೊ೦ದಿಗೆ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.