ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಲೋಕಸಭೆ ಚುನಾವಣೆ: ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾರಿಗೆಲ್ಲ ಟಿಕೆಟ್? ಸಂಭಾವ್ಯ ಅಭ್ಯರ್ಥಿಗಳ ವಿವರ ಇಲ್ಲಿದೆ

ಬೆಂಗಳೂರು, ಮಾರ್ಚ್​ 6: ಲೋಕಸಭೆ ಚುನಾವಣೆಗೆ (Lok Sabha Elections) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ (BJP) ಎರಡನೇ ಪಟ್ಟಿ ಬಿಡುಗಡೆ ಮಾಡುವುದಕ್ಕಾಗಿ ಇಂದು ದೆಹಲಿಯಲ್ಲಿ ಸಭೆ ನಡೆಸುತ್ತಿದೆ. ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಸಭೆಯ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟೆಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಬಿಜೆಪಿಯ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಕೆಲವು ಮಂದಿ ನಾಯಕರಿಗೂ ಟಿಕೆಟ್ ಘೋಷಣೆಯಾಗುವ ನಿರೀಕ್ಷೆ ಇದೆ. ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

  • ಬೆಂಗಳೂರು ಗ್ರಾಮಾಂತರ : ಡಾ. ಮಂಜುನಾಥ್/ಸಿ.ಪಿ. ಯೋಗೇಶ್ವರ್

  • ಚಾಮರಾಜನಗರ: ಡಾ. ಮೋಹನ್

  • ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್‌

  • ತುಮಕೂರು : ವಿ.ಸೋಮಣ್ಣ/ ಜೆ‌.ಸಿ. ಮಾಧುಸ್ವಾಮಿ

  • ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ

  • ಬೆಂಗಳೂರು ಉತ್ತರ : ಡಿ.ವಿ. ಸದಾನಂದ ಗೌಡ/ಸಿ.ಟಿ. ರವಿ/ ನಾರಾಯಣ್/ ವಿವೇಕ್ ರೆಡ್ಡಿ

  • ಮೈಸೂರು: ಪ್ರತಾಪ್‌ ಸಿಂಹ

  • ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ/ ಸಿ.ಟಿ. ರವಿ/ ಪ್ರಮೋದ್ ಮಧ್ವರಾಜ್

  • ದಾವಣಗೆರೆ: ಜಿ.ಎಂ. ಸಿದ್ದೇಶ್ವರ್‌/ಎಂ.ಪಿ. ರೇಣುಕಾಚಾರ್ಯ

  • ಶಿವಮೊಗ್ಗ : ಬಿ.ವೈ. ರಾಘವೇಂದ್ರ

  • ಹಾವೇರಿ: ಬಸವರಾಜ ಬೊಮ್ಮಾಯಿ/ಕೆ.ಇ. ಕಾಂತೇಶ್‌/ ಜಗದೀಶ್ ಶೆಟ್ಟರ್/ ಬಿ.ಸಿ. ಪಾಟೀಲ್

  • ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್‌/ ಅಲೋಕ್‌ ವಿಶ್ವನಾಥ್‌

  • ಉತ್ತರ ಕನ್ನಡ : ಅನಂತ ಕುಮಾರ್‌ ಹೆಗಡೆ/ ವಿಶ್ವೇಶ್ವರ ಹೆಗಡೆ ಕಾಗೇರಿ

  • ದಕ್ಷಿಣ ಕನ್ನಡ: ನಳಿನ್‌ ಕುಮಾರ್‌ ಕಟೀಲ್‌/ಕ್ಯಾ. ಬ್ರಿಜೇಶ್ ಚೌಟ

  • ಹುಬ್ಬಳ್ಳಿ-ಧಾರವಾಡ : ಪ್ರಹ್ಲಾದ್ ಜೋಶಿ

  • ಚಿತ್ರದುರ್ಗ : ಎ. ನಾರಾಯಣ ಸ್ವಾಮಿ/ಮಾದಾರ ಚನ್ನಯ್ಯ ಸ್ವಾಮೀಜಿ

  • ಬಾಗಲಕೋಟೆ : ಪಿ.ಸಿ. ಗದ್ದಿಗೌಡರ್

  • ಬಳ್ಳಾರಿ: ಬಿ. ಶ್ರೀರಾಮುಲು/ ದೇವೇಂದ್ರಪ್ಪ

  • ಕೊಪ್ಪಳ: ಕರಡಿ ಸಂಗಣ್ಣ

  • ವಿಜಯಪುರ: ರಮೇಶ್‌ ಜಿಗಜಿಣಗಿ

  • ಕಲ್ಬುರ್ಗಿ : ಉಮೇಶ್‌ ಜಾಧವ್‌

  • ಬೆಳಗಾವಿ : ಜಗದೀಶ್‌ ಶೆಟ್ಟರ್‌/ರಮೇಶ್ ಕತ್ತಿ/ ಮಂಗಳಾ ಅಂಗಡಿ

  • ಬೀದರ್ : ಭಗವಂತ್‌ ಖೂಬಾ

  • ಚಿಕ್ಕೋಡಿ : ಅಣ್ಣಾಸಾಹೇಬ್ ಜೊಲ್ಲೆ/ರಮೇಶ್‌ ಕತ್ತಿ

  •  ರಾಯಚೂರು : ರಾಜಾ ಅಮರೇಶ್ವರ ನಾಯಕ್/ ರಾಜೂ ಗೌಡ ಇಂದು ಸಂಜೆ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗುವ ಎಲ್ಲ ಸಾಧ್ಯತೆಗಳಿವೆ. ಕರ್ನಾಟಕದ ಪ್ರಮುಖ ನಾಯಕರು ಕೂಡ ಇಂದಿನ ಸಭೆಯಲ್ಲಿ ಭಾಗವಹಿಸುತ್ತಿರುವುದರಿಂದ ರಾಜ್ಯದ ಹಲವು ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗುವ ನಿರೀಕ್ಷೆ ದಟ್ಟವಾಗಿದೆ.

kiniudupi@rediffmail.com

No Comments

Leave A Comment