Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಆರೋಪಿಗಳು ರಾಜ್ಯ ತೊರೆದಿರುವ ಸಾಧ್ಯತೆ ಇದೆ!

ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳು ರಾಜ್ಯ ತೊರೆದಿರುವ ಸಾಧ್ಯತೆಗಳಿವೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಪೊಲೀಸರು ಯಾವುದೇ ಪ್ರಗತಿ ಸಾಧಿಸಿಲ್ಲ. ಆದರೆ, ಆರೋಪಿಗಳು ನೆರೆ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆಗಳಿವೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಶಂಕಿತನ ಮತ್ತೊಂದು ವೀಡಿಯೊ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಶಂಕಿತ ವ್ಯಕ್ತಿ ಬೆಳಿಗ್ಗೆ 11.34 ಕ್ಕೆ ಕೆಫೆ ಪ್ರವೇಶಿಸಿದ್ದು 11.43 ಕ್ಕೆ ಹೊರಗೆ ಬರುತ್ತಿರುವುದು ಕಂಡು ಬಂದಿದೆ. ಕೇವಲ ಒಂಬತ್ತು ನಿಮಿಷಗಳಲ್ಲಿ ಶಂಕಿತ ವ್ಯಕ್ತಿ ಕೆಫೆಯಲ್ಲಿ ರವೆ ಇಡ್ಲಿ ಸೇವಿಸಿ, ಬಾಂಬ್ ಇದ್ದ ಕೈಚೀಲವನ್ನು ಹ್ಯಾಂಡ್ ವಾಶ್ ಬೇಸಿನ್ ಬಳಿ ಇರಿಸಿ, ಹೊರಗೆ ಬಂದಿದ್ದಾರೆ.

ಕೆಫೆಗೆ ಪ್ರವೇಶಿಸುವಾಗ ಆತನ ಬಳಿಯಿದ್ದ ಭಾರವಾದ ಬ್ಯಾಗ್, ಹೊರಗೆ ಬರುವಾಗ ಸಣ್ಣಗಾತ್ರದ ಬ್ಯಾಗ್ ತರುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಒಳ ಹೋಗುವಾಗ ಹಾಗೂ ಹೊರ ಬರುವಾಗ ಎರಡೂ ಸಮಯದಲ್ಲೂ ಆರೋಪ ಮೊಬೈಲ್ ಫೋನ್ ನೋಡುತ್ತಾ, ಫೋನ್ ನಲ್ಲಿ ಮಾತನಾಡುತ್ತಾ ಹೊರಗೆ ಬರುತ್ತಿರುವುದು ಕಂಡು ಬಂದಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ತನ್ನ ಮುಖ ಕಾಣದಂತೆ ಮಾಡಲು ಈ ರೀತಿ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ)ಕ್ಕೆ ಸಂಬಂಧಿಸಿದ ವಸ್ತುಗಳು, ಚೂರುಗಳೂ ಕೂಡ ಪತ್ತೆಯಾಗಿದ್ದು, ಈ ವಸ್ತುಗಳು ನೇರವಾಗಿ ಜನರ ಮೇಲೆ ಬಿದ್ದಿದ್ದರೆ, ಸಾವುಗಳು ಸಂಭವಿಸುತ್ತಿತ್ತು ಎಂದು ತಿಳಿಸಿದ್ದಾರೆ.

ಸ್ಫೋಟದಲ್ಲಿ ಮಹಿಳೆ ಸೇರಿದಂತೆ 10 ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆಯನ್ನು ಹೊರತುಪಡಿಸಿ ಉಳಿದವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ.

No Comments

Leave A Comment