ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಬೆಂಗಳೂರು: ಕೆಐಎಯಲ್ಲಿ 2.63 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಚಿನ್ನ ವಶಕ್ಕೆ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಬ್ಬರು ಪ್ರಯಾಣಿಕರಿಂದ 2.63 ಕೋಟಿ ರೂಪಾಯಿ ಮೌಲ್ಯದ 4.249 ಗ್ರಾಂ ಚಿನ್ನವನ್ನು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ವಶಪಡಿಸಿಕೊಂಡ ನಾಲ್ಕನೇ ಪ್ರಕರಣ ಇದಾಗಿದೆ.
ಇಲ್ಲಿಯವರೆಗೆ, ಕೇಂದ್ರ ಸಂಸ್ಥೆ ಎಲ್ಲಾ ನಾಲ್ಕು ಕಾರ್ಯಾಚರಣೆಗಳಲ್ಲಿ 12.44 ಕೋಟಿ ಮೌಲ್ಯದ ಸುಮಾರು 20 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 28 ರಂದು ಡಿಆರ್‌ಐ ಅಧಿಕಾರಿಗಳು ಸಿಂಗಾಪುರದಿಂದ ಏರ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರಿಗೆ ಬಂದ ಥಾಯ್ ಪ್ರಜೆಯನ್ನು ತಡೆದಿದ್ದು, ತಪಾಸಣೆ ವೇಳೆ ಕಚ್ಚಾ ಆಭರಣಗಳ ರೂಪದಲ್ಲಿದ್ದ 2,751 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಎರಡನೇ ಪ್ರಕರಣದಲ್ಲಿ, ಎಮಿರೇಟ್ಸ್ ವಿಮಾನದ ಮೂಲಕ ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನನ್ನು ತಡೆದ ಅಧಿಕಾರಿಗಳು, ಆತನ ಜೇಬಿನಿಂದ 1,498 ಗ್ರಾಂ ತೂಕದ ಚಿನ್ನದ ಬಾರ್ ಅನ್ನು ವಶಪಡಿಸಿಕೊಂಡಿದ್ದರು.
ಇತ್ತೀಚೆಗೆ ಥಾಯ್ ಪ್ರಜೆಯಿಂದ ಸುಮಾರು 825 ಗ್ರಾಂ ಚಿನ್ನ ಮತ್ತು ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳುತ್ತಿದ್ದ ಓರ್ವ ಭಾರತೀಯನಿಂದ 52 ಲಕ್ಷ ರೂ.ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಕೌಲಾಲಂಪುರಕ್ಕೆ ತೆರಳುತ್ತಿದ್ದ ಭಾರತೀಯ ಪ್ರಜೆಯೊಬ್ಬರ ಚೆಕ್-ಇನ್ ಬ್ಯಾಗೇಜ್‌ನಲ್ಲಿ 500 ರೂಪಾಯಿ ನೋಟುಗಳ ಬಂಡಲ್‌ಗಳಲ್ಲಿ ಸಾಗಿಸುತ್ತಿದ್ದ 51, 95, 500 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಕೆಐಎ ಮೂಲಗಳು ಮಾಹಿತಿ ನೀಡಿವೆ.