ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಭಾರತೀಯ ನೌಕಾಪಡೆ,ಎನ್ ಸಿಬಿಯಿಂದ ಮಹತ್ವದ ಕಾರ್ಯಾಚರಣೆ: 3,300 ಕೆಜಿಗೂ ಹೆಚ್ಚು ಡ್ರಗ್ಸ್ ವಶ, ಪಾಕ್ ಪ್ರಜೆಗಳ ಬಂಧನ

ನವದೆಹಲಿ,ಫೆ 28: ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮಹತ್ವದ ಕಾರ್ಯಾಚರಣೆಯಲ್ಲಿ ಗುಜರಾತ್‌ನ ಪೋರಬಂದರ್ ಬಳಿ ಸಣ್ಣ ಹಡಗೊಂದರಿಂದ 3,300 ಕೆಜಿಗೂ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಇದು ನೌಕಾಪಡೆ ಘೋಷಿಸಿದಂತೆ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಮಾದಕ ದ್ರವ್ಯ ದಂಧೆ ಪತ್ತೆಯಾಗಿದೆ.

ನೌಕಾಪಡೆಯು ಮಂಗಳವಾರದಂದು ಅನುಮಾನಸ್ಪದ್ದ ಸಣ್ಣ ಹಡಗನ್ನು ತಡೆಹಿಡಿದಿದ್ದು, ಪರಿಶೀಲನೆ ವೇಳೆ 3,089 ಕೆಜಿ ಚರಸ್, 158 ಕೆಜಿ ಮೆಥಾಂಫೆಟಮೈನ್ ಮತ್ತು 25 ಕೆಜಿ ಮಾರ್ಫಿನ್ ದೊರಕ್ಕಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಹಡಗಿನಲ್ಲಿ ಎಲ್ಲಾ ಐವರು ಸಿಬ್ಬಂದಿಯನ್ನು ಪಾಕಿಸ್ತಾನಿ ಪ್ರಜೆಗಳು ಎಂದು ಗುರುತಿಸಲಾಗಿದ್ದು ಅವರನ್ನು ಅವರನ್ನು ಬಂಧಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವಿಟರ್‌ನಲ್ಲಿ ಈ ವಿಚಾರವನ್ನು ಟ್ವೀಟ್ ಮಾಡಿದ್ದು, ಮಾದಕ ವಸ್ತು ಕಳ್ಳಸಾಗಣೆ ವಿರುದ್ಧದ ಭಾರತದ ಹೋರಾಟದಲ್ಲಿ ಮಹತ್ವದ ಸಾಧನೆ ಎಂದು ಘೋಷಿಸಿದ್ದಾರೆ, ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸರನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ರಾಷ್ಟ್ರದ ಅತಿದೊಡ್ಡ ಕಡಲಾಚೆಯ ಮಾದಕ ದ್ರವ್ಯ ದಂಧೆಯಲ್ಲಿ 3,132 ಕೆಜಿಯಷ್ಟು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ, ಇದು ಮಾದಕ ದ್ರವ್ಯ ಮುಕ್ತ ಭಾರತ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಬರೆದುಕೊಂಡಿದ್ದಾರೆ.

No Comments

Leave A Comment