Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿ ನಾಯಕರಿಂದ ಕಾದಾಟ ಇವರಿಂದ ಉಡುಪಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ – ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಕೇಂದ್ರದ ಸಚಿವೆಯಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ರವರು ಸಂಪೂರ್ಣವಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಕಡೆಗಣಿಸಿ ಬೆಂಗಳೂರು ಮತ್ತು ದೆಹಲಿಯಲ್ಲಿ ಉಳಿದುಕೊಂಡು ರಾಜಕಾರಣ ಮಾಡಿದ್ದಾರೆ ಹೊರತು ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಯಾವುದೇ ಕೊಡುಗೆಯನ್ನು ನೀಡಲಿಲ್ಲ ಇಂದ್ರಾಳಿಯ ರೈಲ್ವೆ ಬ್ರಿಡ್ಜ್ ಆಗಲಿ ಕಲ್ಯಾಣಪುರ ಮೇಲ್ ಸೇತುವೆಯಾಗಲಿ ಇವೆರಡರ ಕಾಮಗಾರಿಗಳು ಇನ್ನೂ ಕುಂಟುತ್ತಾ ಸಾಗುತ್ತಿವೆ ಪರ್ಕಳದ ರಸ್ತೆಗೆ ಗತಿಯೇ ಇಲ್ಲದಂತಾಗಿದೆ ಕಲ್ಮಾಡಿ ಮಲ್ಪೆಯಲ್ಲಿ ಜಾಗ ಬಿಡುವವ ರಿಗೆ ಪರಿಹಾರವೇ ಇಲ್ಲದಂತಾಗಿದೆ.

ಕ್ಷೇತ್ರದಲ್ಲಿ ಯಾರಾದರೂ ಹಿಂದೂ ಯುವಕರ ಕೊಲೆಯಾದರೆ ಇಲ್ಲಿ ಬಂದು ಅಬ್ಬಿರಿದು ಬೊಬ್ಬೆ ಯನ್ನು ಹೊಡೆಯುತ್ತಾರೆ. ಕ್ಷೇತ್ರದ ಜನತೆಯ ಕೈಗೆ ಸಿಗದೆ ವರ್ಷಕ್ಕಮ್ಮೆ ಮುಖ ತೋರಿಸುವಂತ ಈ ಸಂಸದೇ ಯ ವಿರುದ್ಧವೇ ಬಿಜೆಪಿಯ ಕಾರ್ಯಕರ್ತರೇ ತೀರುಗಿ ಬಿದ್ದಿದ್ದಾರೆ ಹಾಗಾದರೆ ಉಳಿದ ಮತದಾರರ ಪಾಡೇನು ಕೇವಲ ಮೋದಿಯ ಹೆಸರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂಬುದು ಇವರ ತಲೆಯಲ್ಲಿ ತುಂಬಿಹೋಗಿದೆ ಅದಕ್ಕಾಗಿ ಸುಲಭದಲ್ಲಿ ತಾವು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಯೋಚನೆಯಲ್ಲಿ ಈ ಬಿಜೆಪಿ ನಾಯಕರು ಇದ್ದು ಆ ಕಾರಣಕ್ಕಾಗಿ ಇಲ್ಲಿ ಬಿಜೆಪಿ ಟಿಕೆಟ್ ಗಾಗಿ ಫೈಟ್ ನಡೆದಿದೆ.

ಇದನ್ನು ನಮ್ಮ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮತದಾರರು ಗಮನಿಸಬೇಕಾಗಿದೆ ಅಭಿವೃದ್ಧಿಯ ಕಡೆಗೆ ತಲೆಕೊಡದೆ ಬೆಲೆ ಏರಿಕೆಯ ಬಗ್ಗೆ ಕಿಂಚಿತ್ತು ಬಾಯ್ ಬಿಡದೆ ಕ್ಷೇತ್ರದ ಜನತೆಗೆ ಸರಿಯಾಗಿ ಸಿಗದೇ ಕೇವಲ ಮೋದಿ ಮೋದಿ ಎಂದು ಹೇಳುವ ಈ ಬಿಜೆಪಿಯ ಅಭ್ಯರ್ಥಿಯನ್ನು ಈ ಬಾರಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಮತದಾರರು ಸೋಲಿಸಿ ಐದು ಗ್ಯಾರಂಟಿಗಳ ಕೊಡುಗೆಯನ್ನು ನೀಡಿದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ಪಕ್ಷ ನೀಡುವ ಗ್ಯಾರಂಟಿಗಳು ನಮಗೆಲ್ಲರಿಗೂ ಸಿಗುವಂತಾಗಲಿ.

ಈ ಬೆಲೆ ಏರಿಕೆ ನೀತಿಯಿಂದ ಕಂಗೆಟ್ಟ ಜನಸಾಮಾನ್ಯರಿಗೆ ಕಾಂಗ್ರೆಸ್ ಪಕ್ಷವು ಆಸರೆಯಾಗಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ನಮ್ಮ ಕ್ಷೇತ್ರದ ಜನರು ಗೆಲ್ಲಿಸುವಂತಾಗಬೇಕೆಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment