ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕ ಮುಡಿಗೇರಿಸಿಕೊಂಡ ಕೋಟ ದಿನೇಶ್ ಗಾಣಿಗ
ಕೋಟ: ಕೋಟದ ದಿನೇಶ್ ಗಾಣಿಗ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಮೂರು ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಫೆ. 22 ರಿಂದ 25 ರ ತನಕ ಥೈಲ್ಯಾಂಡ್‌ನ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನ, ಹಡಲ್ಸ್ ನಲ್ಲಿ ದ್ವೀತಿಯ, ಒಂದು ಬೆಳ್ಳಿ ಮತ್ತು ವೇಗ ನಡಿಗೆಯಲ್ಲಿ ತೃತೀಯ, ಒಂದು ಕಂಚು ಪಡೆದುಕೊಂಡಿದ್ದಾರೆ. ಈ ಹಿಂದೆ ಕೂಡ ಸಿಂಗಾಪುರ್, ಮಲೇಷಿಯಾ ಹಾಗೂ ಶ್ರೀಲಂಕಾ ರಾಷ್ರ್ಟ್ರದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಚಿನ್ನ ಬೆಳ್ಳಿ ಕಂಚು ಪದಕ ವಿಜೇತರಾಗಿರುತ್ತಾರೆ.