Log In
BREAKING NEWS >
``````````````ನಮ್ಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ,ಓದುಗರಿಗೆ ಕರಾವಳಿ ಕಿರಣ ಡಾಟ್ ಕಾ೦ನ ವತಿಯಿ೦ದ "ಚ೦ದ್ರಮಾನ ಯುಗಾದಿ"ಯ ಶುಭಾಶಯಗಳು `````````````

ಪಕ್ಷಾಂತರ ಆರೋಪ: ಆಂಧ್ರ ಪ್ರದೇಶದ 8 ಶಾಸಕರು ಅನರ್ಹಗೊಳಿಸಿದ ಸ್ಪೀಕರ್

ಅಮರಾವತಿ: ದೇಶಾದ್ಯಂತ ರಾಜ್ಯಸಭೆ ಚುನಾವಣಾ ಮತದಾನ ಬಿರುಸಿನಿಂದ ಸಾಗಿರುವಂತೆಯೇ ಇತ್ತ ಆಂಧ್ರ ಪ್ರದೇಶದಲ್ಲಿ ವಿಧಾನಸಭೆಯ ಸ್ಪೀಕರ್ 8 ಶಾಸಕರನ್ನು ಅನರ್ಹಗೊಳಿಸಿದ್ದಾರೆ.

ಆಂಧ್ರಪ್ರದೇಶ ವಿಧಾನಸಭೆಯ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರು ಪಕ್ಷಾಂತರಿಗಳ ವಿರುದ್ಧ ನಿರ್ಣಾಯಕ ನಿಲುವನ್ನು ತೆಗೆದುಕೊಂಡಿದ್ದು, 8 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಸಲ್ಲಿಸಿದ ಅರ್ಜಿಯ ಮೇರೆಗೆ ಆ ಪಕ್ಷದ ಆನಂ ರಾಮನಾರಾಯಣ ರೆಡ್ಡಿ, ಮೇಕಪತಿ ಚಂದ್ರಶೇಖರ್ ರೆಡ್ಡಿ, ಕೋಟಂ ರೆಡ್ಡಿ ಶ್ರೀಧರ್ ರೆಡ್ಡಿ ಮತ್ತು ಉಂಡವಳ್ಳಿ ಶ್ರೀದೇವಿ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಅನರ್ಹಗೊಳಿಸುವ ವೇಳೆ ‘ಅನರ್ಹಗೊಂಡ ಶಾಸಕರು ತಮ್ಮ ಮೂಲ ಪಕ್ಷದಿಂದ ಬೇರೆ ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದಾರೆ, ಇದು ಪ್ರಜಾಪ್ರಭುತ್ವದ ರಚನೆ ಮತ್ತು ಮತದಾರರ ಆದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಸಿಎಂ ಕಚೇರಿ ‘ಶಾಸಕರ ವಿರುದ್ಧ ವೈಎಸ್‌ಆರ್‌ಸಿಪಿಯ ಅರ್ಜಿಯಲ್ಲಿ ಮಾಡಲಾದ ಆರೋಪಗಳು ಮತ್ತು ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅನರ್ಹತೆ ನಿರ್ಧಾರಕ್ಕೆ ಬರಲಾಗಿದೆ. ಅನರ್ಹಗೊಂಡ ಸದಸ್ಯರು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಮತ್ತು ಪಕ್ಷದ ತತ್ವಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.

No Comments

Leave A Comment