ನನಗೆ ಯಾರು ಭರವಸೆ ಕೊಡುತ್ತಾರೋ ಅವರಿಗೆ ನಾನು ನನ್ನ ಮತ ಹಾಕುತ್ತೇನೆ. ನೆಪ ಹೇಳುತ್ತಿಲ್ಲ. ಹೇಳಿದ ಹಾಗೆ ಮತ ಚಲಾಯಿಸಿದ್ದೇನೆ. ಓಟು ಹಾಕಿಸಿಕೊಳ್ಳುವ ಮೊದಲು ಭರವಸೆ ನೀಡುತ್ತಾರೆ. 5 ಕೋಟಿ ರೂ. ಅನುದಾನ ಬರುತ್ತದೆ. ಆದರೆ, ಅದನ್ನು ನಮಗೆ ಕೊಡುತ್ತಾರಾ? ಆತ್ಮಸಾಕ್ಷಿಯಾಗಿ ಅಲ್ಲಿ (ವಿಧಾನಸೌಧಕ್ಕೆ) ಹೋಗಿ ಮತ ಚಲಾಯಿಸುತ್ತೇನೆ ಎಂದು ಹೇಳಿದರು.
ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಅಂತ ಹೇಳಿಲ್ಲ. ಪಕ್ಷ ಏನು ಹೇಳುತ್ತದೋ ಅದನ್ನು ಮಾಡಿದ್ದೆ ಎಂದ ಅವರು, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಏನು ಸಾಚಾನಾ? ಅವರು ಅವಕಾಶವಾದಿ ಅಲ್ವಾ? ಇವರನ್ನು ಮುಖ್ಯಮಂತ್ರಿ ಮಾಡಿರಲಿಲ್ವಾ? ಸಿಎಂ ಆದ್ಮೇಲೆ ಒಂದು, ಆಮೇಲೆ ಒಂದಾ? ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದ್ದರು.
ಇದರ ನಡುವೆ ಮತದಾನ ಮಾಡಿದ ಬಳಿಕ ಮಾತನಾಡಿರುವ ಎಸ್‌ಟಿ ಸೋಮಶೇಖರ್, “ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಿದ್ದೇನೆ. ನಾನು ಮತದಾನ ಮಾಡಿದ್ದನ್ನು ಏಜೆಂಟ್‌ಗೆ ತೋರಿಸಿದ್ದೇನೆ,” ಎಂದಿದ್ದಾರೆ.