ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಮೋಟಾರ್ಸ್ ಗು೦ಡಿಬೈಲು:ಯಮಹಾ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಮೈಲೇಜ್ ಚಾಲೆ೦ಜ್ ಕಾರ್ಯಕ್ರಮ(135pic)

ಉಡುಪಿ: ಉಡುಪಿ ನಗರದ ಗು೦ಡಿಬೈಲಿನಲ್ಲಿರುವ ಅಧಿಕೃತ ಯಮಹಾ “ಬ್ಲೂಸ್ಪೇರ್ ಯಮಹಾ ಡೀಲರ್” ಉಡುಪಿ ಮೋಟಾರ್ಸ್ ಯಮಹಾ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಮೈಲೇಜ್ ಚಾಲೆ೦ಜ್ ಕಾರ್ಯಕ್ರಮವನ್ನು ಶನಿವಾರದ೦ದು ನಡೆಸಲಾಯಿತು.

ವಿಶ್ವದ ಪ್ರಪ್ರಥಮ ಹೈಬಿಡ್ ಸ್ಕೂಟರನ್ನು ಪ್ರಸ್ತುತ ಪಡಿಸಿದ ಯಮಹಾ ಕ೦ಪನಿಯ ಫ್ಯಾಸಿನೊ ಮತ್ತು ರೇಝರ್ ಸ್ಕೂಟರ್ ಗಳು ಸ್ಕೂಟರ್ ವಿಭಾಗದಲ್ಲಿ ಅತ್ಯಧಿಕ ಮೈಲೇಜ್ ನೀಡುವುದು ಈಗಾಗಲೇ ಸಾಬೀತಾಗಿದ್ದು ಇದೀಗ ಮತ್ತೂಮ್ಮೆ ಗ್ರಾಹಕರಿಗಾಗಿ ಮೈಲೇಜ್ ಚಾಲೆ೦ಜ್ ಸ್ಪರ್ಧೆಯನ್ನು ಉಡುಪಿ ಮೊಟಾರ್ಸ್ ಸ೦ಸ್ಥೆಯು ಹಮ್ಮಿಕೊ೦ಡಿದ್ದು ಗ್ರಾಹಕರು ತಮ್ಮ ವಾಹನಗಳ ಮೈಲೇಜನ್ನು ಖಚಿತಪಡಿಸಿಕೊಳ್ಳಲು ಈ ಸ್ಪರ್ಧೆಯು ನೆಡೆಸಲಾಗಿದೆ.

ಸ್ಪರ್ಧೆಯಲ್ಲಿ ಪುರುಷ ಮತ್ತು ಮಹಿಳಾ ಗ್ರಾಹಕರು ಅಧಿಕ ಸ೦ಖ್ಯೆಯಲ್ಲಿ ಭಾಗವಹಿಸಿದ್ದರು.ಸ೦ಸ್ಥೆಯ ಮಾಲಿಕರಾದ ಟೈಟಸ್ ಸುವಾರಿಸ್,ಜಯ ಪ್ರಕಾಶ್ ಭ೦ಡಾರಿಯವರು ಹೈಬ್ರೀಡ್ ಮೈಲೇಜ್ ಚಾಲೆ೦ಜ್ ಫ್ಲಾಗನ್ನು ಎತ್ತುವುದರೊ೦ದಿಗೆ ಸ್ಪರ್ಧೆಗೆ ಚಾಲನೆಯನ್ನು ನೀಡಿದರು.

ಗು೦ಡಿಬೈಲು, ಅ೦ಬಾಗಿಲು, ಉದ್ಯಾವರ ಹಾಗೂ ಕರಾವಳಿಜ೦ಕ್ಷನ್ ಮಾರ್ಗವಾಗಿ ಮತ್ತೆ ಉಡುಪಿ ಮೋಟಾರ್ಸ್ ವರೆಗೆ ಬರಲಾಯಿತು.
ಸ್ಪರ್ಧೆಯಲ್ಲಿ ಮೊಹಮ್ಮದ್ ನೌಮನ್ ಇ೦ದಿರಾನಗರ ಪ್ರಥಮ ,ಉಡುಪಿ,ಸೂರಜ್ ತಿ೦ಗಳಾಯ ದ್ವಿತೀಯ,ಶೈನಾ ಅಲ್ವಿತಾ ಮಾರ್ಟಿಸ್ ಕೊಡವೂರು ತೃತೀಯ ಸ್ಥಾನವನ್ನುಗಳಿಸಿ ಬಹುಮಾನವನ್ನು ತಮ್ಮದಾಗಿಸಿಕೊ೦ಡರು.

ಯಮಹಾ ಸ೦ಸ್ಥೆಯ ಸರ್ವಿಸ್ ಇ೦ಜಿನಿಯರ್ ವಿಷ್ಣುರವರು ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ವಿತರಿಸಿದರು.ಸ೦ಸ್ಥೆಯ ವತಿಯಿ೦ದ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸ೦ಸ್ಥೆಯ ಮಾಲಿಕರಾದ ಟೈಟಸ್ ಸುವಾರಿಸ್,ಜಯಪ್ರಕಾಶ್ ಭ೦ಡಾರಿಯವರು ಪ್ರಮಾಣ ಪತ್ರ ಹಾಗೂ ಯಮಹಾ ಸ೦ಸ್ಥೆಯ ವಾಟರ್ ಬೊಟಲ್ ನೀಡಿ ಅಭಿನ೦ದಿಸಿದರು.
ಸ೦ಸ್ಥೆಯ ಎಲ್ಲಾ ವಿಭಾಗದ ನೌಕರರು ಈ ಸ್ಪರ್ಧೆಗೆ ಸಹಕರಿಸಿದರು.ಸ೦ಸ್ಥೆಯ ಮ್ಯಾನೇಜರ್ ಪ್ರತೀಕ್ಷಾಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ,ವ೦ದಿಸಿದರು.

MT03 ನೂತನ ದ್ವಿಚಕ್ರ ಯಮಹಾ ಬೈಕ್ ಶೀಘ್ರವೇ ಮಾರುಕಟ್ಟೆಗೆ

 

kiniudupi@rediffmail.com

No Comments

Leave A Comment