ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾಯಚೂರು ಶಿರೂರು ಶ್ರೀವಾಮನ ತೀರ್ಥಸ೦ಸ್ಥಾನ ಮಠಕ್ಕೆ ಉಡುಪಿ ಶೀರೂರು ಶ್ರೀವೇದವರ್ಧನ ತೀರ್ಥರ ಭೇಟಿ
ರಾಯಚೂರು:ಮು೦ಗ್ಲಿ ಪ್ರಾಣದೇವ ಸೇವಾ ಸಮಿತಿ ಮತ್ತು ಯುವ ವಿಪ್ರ ವೃಂದ ರಾಯಚೂರು ಇವರಿಂದ ಚಾಂದ್ರಮಧ್ವನವಮಿ ಪ್ರಯುಕ್ತ ರಾಯಚೂರುನಲ್ಲಿ ಭಾವಿಪರ್ಯಾಯ ಪೀಠಾಧೀಶರಾದ ಶೀರೂರು ಶ್ರೀವೇದವರ್ಧನ ತೀರ್ಥರು ಭೇಟಿ ನೀಡಿದರು. ಈ ಸ೦ದರ್ಭದಲ್ಲಿ ಶ್ರೀಗಳವರನ್ನು ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಪುರಪ್ರವೇಶವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖ್ಯಸ್ಥರಾದ ರಾಮರಾವ್ ದೇಸಾಯಿ, ಜಯ ಕುಮಾರ್ ಗಬ್ಬೂರು, ಮುಂಗ್ಲಿ ಪ್ರಾಣದೇವರ ಅರ್ಚಕ ವೃಂದ ಹಾಗೂ ಅಸಂಖ್ಯ ಭಕ್ತವೃಂದದವರು,ಶ್ರೀ ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರು, ಪಾರುಪತ್ಯಗಾರರಾದ ಶ್ರೀಶ ಭಟ್ ಕಡೆಕಾರುಪಾಲ್ಗೊಂಡಿದ್ದರು.
ಮಧ್ವಾಚಾರ್ಯರ ಭಾವಚಿತ್ರ ಮತ್ತು ಸರ್ವಮೂಲ ಗ್ರಂಥಗಳ ಮೆರವಣಿಗೆಯನ್ನು ನಡೆಸಿದರು. ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ನಾಸಿಕ್ ಬ್ಯಾಂಡ್,ಪೂರ್ಣಕು೦ಭದೊ೦ದಿಗೆ ಸುಮಾರು 50 ಜನರ ತಂಡ ನೆರವೇರಿಸಿದರೆ ಯುವಕರು ಭಕ್ತಿಯಿ೦ದ ಕುಣಿದು ಕುಪ್ಪಳಿಸಿದರು.