ಈ ಉಪಗ್ರಹವು ಭೂ ವಿಜ್ಞಾನ ಸಚಿವಾಲಯದ(MoES) ಬಳಕೆದಾರ-ಧನಸಹಾಯದ ಯೋಜನೆಯಾಗಿದ್ದು, 2275 ಕೆಜಿಯಷ್ಟು ಲಿಫ್ಟ್-ಆಫ್ ಮಾಸ್ ಹೊಂದಿದೆ. ಉಪಗ್ರಹ ತಯಾರಿಕೆಗೆ ಭಾರತೀಯ ಕೈಗಾರಿಕೆಗಳು ಗಣನೀಯ ಕೊಡುಗೆ ನೀಡಿವೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
INSAT-3DS ಉಪಗ್ರಹವನ್ನು ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಗಾಗಿ ಹವಾಮಾನ ವೀಕ್ಷಣೆಗಳು, ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆಗಾಗಿ ವಿನ್ಯಾಸಗೊಳಿಸಲಾಗಿದೆ.
ಉಪಗ್ರಹ ಉಡಾವಣೆಯ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು, ಉಪಗ್ರಹವನ್ನು ಉತ್ತಮ ಕಕ್ಷೆಯಲ್ಲಿ ಇರಿಸಲಾಗಿದೆ ಮತ್ತು “ಉತ್ತಮ ಸ್ಥಿತಿಯಲ್ಲಿದೆ” ಎಂದು ಹೇಳಿದರು. ಉಪಗ್ರಹ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ಅದರಲ್ಲಿ ಕೆಲಸ ಮಾಡಿದ ಎಲ್ಲಾ ತಂಡಗಳು ಮತ್ತು ಇಲಾಖೆಗಳನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.