ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಕಾಸರಗೋಡು: ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿ ಪತ್ತೆ, ಕಾರಣ ನಿಗೂಢ
ಕಾಸರಗೋಡು:ಫೆ 16 : ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಞಿಂಗಾಡ್ ನಲ್ಲಿ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸೂರ್ಯ ಪ್ರಕಾಶ್ (55), ಪತ್ನಿ ಗೀತಾ (48) ಮತ್ತು ಸೂರ್ಯ ಪ್ರಕಾಶ್ ರವರ ತಾಯಿ ಲೀಲಾ (90) ಮೃತ ಪಟ್ಟವರು.
ಸೂರ್ಯ ಪ್ರಕಾಶ್ ಕಾಞಿಂಗಾಡ್ ನಲ್ಲಿ ವಾಚ್ ವರ್ಕ್ಸ್ ಮಳಿಗೆ ನಡೆಸುತ್ತಿದ್ದು, ರೈಲ್ವೆ ನಿಲ್ದಾಣ ಪರಿಸರದ ಅವಿಕ್ಕರೆಯಲ್ಲಿರುವ ವಸತಿಗೃಹದಲ್ಲಿ ಮೃತ ದೇಹ ಪತ್ತೆಯಾಗಿದೆ.
ಮಾಹಿತಿ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸೂರ್ಯ ಪ್ರಕಾಶ್ ರವರ ಪುತ್ರ ಅಜಯ್ ಉದ್ಯೋಗ ನಿಮಿತ್ತ ಎರ್ನಾಕುಲಂಗೆ ತೆರಳಿದ್ದರು. ಈ ದಂಪತಿಗಲಿಗೆ ಇಬ್ಬರು ಹೆಣ್ಮಕ್ಕಳಿದ್ದು ಅವರ ವಿವಾಹವಾಗಿದೆ. ಮನೆಯಲ್ಲಿ ಮೂವರು ಮಾತ್ರ ಇದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ