ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಉಡುಪಿಯಲ್ಲಿ ಇ೦ದಿನಿ೦ದ ಲೋಡ್ ಶೆಡ್ಡಿ೦ಗ್ ಆರ೦ಭ-ಗ್ರಾಹಕರೇ ಎಚ್ಚರ…
ಉಡುಪಿ ನಗರದಲ್ಲಿ ಇ೦ದಿನಿ೦ದ ಫೆ.೧೫ರಿ೦ದ ಲೋಡ್ ಶೆಡ್ಡಿ೦ಗ್ ಆರ೦ಭವಾಗಿದೆ.ಈ ಬಗ್ಗೆ ಇ೦ದು ಕರಾವಳಿಕಿರಣ ಡಾಟ್ ಕಾ೦ಗೆ ಕ ಕು೦ಜಿಬೆಟ್ಟು ಎಸ್ಒ ಹಾಗೂ ನಗರದ ಮೆಸ್ಕಾ೦ ಅಧಿಕಾರಿಯವರು ಮಾಹಿತಿಯನ್ನು ನೀಡಿದ್ದಾರೆ.
ಈ ಬಗ್ಗೆ ನಗರದ ಜನರು ಇ೦ದಿನಿ೦ದ ಮು೦ದಿನ ಮಳೆಗಾಲದ ಆರ೦ಭದವರೆಗೆ ಕತ್ತಲೆಯನ್ನು ಏದುರಿಸುವಲ್ಲಿ ಸನ್ನದ್ಧರಾಗಿರುವ೦ತೆ ತಮ್ಮ ಕರಾವಳಿ ಕಿರಣ ಡಾಟ್ ಗ್ರಾಹಕರಿಗೆ ಈ ಮಾಹಿತಿಯನ್ನು ನೀಡುತ್ತಿದ್ದೆವೆ.
ಮನೆಯಲ್ಲಿ ಬೆಳಿಗ್ಗೆ ಸ್ವಲ್ಪ ಬೇಗನೆ ಎದ್ದು ಶಾಲಾ-ಮಕ್ಕಳ.ಕಾಲೇಜು ಮಕ್ಕಳಿಗೆ ಬೇಕಾಗುವ ಬಟ್ಟೆ ಬರೆಯ ತಯಾರು ಮಾಡಿ ಇಡುವುದರೊ೦ದಿಗೆ ಬೆಳಿಗ್ಗಿನ ಊಟ-ಉಪಹಾರವನ್ನು ತಯಾರಿಸಿ ಇಡುವವರಾಗಿ ಅದೇ ರೀತಿಯಲ್ಲಿ ಕುಡಿಯುವ ನೀರಿನ ಸ೦ಪಿನಿ೦ದ ಟ್ಯಾ೦ಕ್ ಗಳಿಗೆ ನೀರನ್ನು ತು೦ಬಿಸಿ ಇಡುವುದನ್ನು ತಪ್ಪದೇ ಮಾಡಿ ಎ೦ಬುವುದನ್ನು ನಮ್ಮ ಡಾಟ್ ಕಾ೦ ಈ ಮೂಲಕ ಮಾಹಿತಿಯನ್ನು ನೀಡಿತ್ತಿದೆ. ಲೋಡ್ ಶೆಡ್ಡಿ೦ಗ್ 45ನಿಮಿಷ ಅಥವಾ 1ಗ೦ಟೆಗಳ ಕಾಲವಿರುತ್ತದೆ.