ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮಾರುಕಟ್ಟೆಯಲ್ಲಿ ಕಟಪಾಡಿ ದೊಡ್ಡ-ಸಣ್ಣ ಅವಡೆ(ಬಗ್ಡೊ),ಹುರುಳಿ,ಕಪ್ಪು ಹೆಸರು,ಅಳ ಸ೦ಡೆ ಕಾಳಿಗೆ ಭಾರೀ ಬೇಡಿಕೆ

ಉಡುಪಿಯ ಕರಾವಳಿಯಲ್ಲಿನ ಕಟಪಾಡಿಯ ಮಟ್ಟುಗುಳ್ಳುಕ್ಕೆ ಹೇಗೆ ಬೇಡಿಕೆಯಿದೆಯೋ ಅದೇ ರೀತಿಯಲ್ಲಿ ಕಟಪಾಡಿಯ ದೊಡ್ಡ-ಸಣ್ಣ ಅವಡೆ(ಬಗ್ಡೊ),ಹುರುಳಿ,ಕಪ್ಪು ಹೆಸರು,ಉರುಳಿ,ಅಳ ಸ೦ಡೆ ಕಾಳಿಗೆ ಈ ಭಾರೀ ಬೇಡಿಕೆ. ಇದು ಇನ್ನು ಮಾರ್ಚ್ ತಿ೦ಗಳವರೆಗೆ ಮಾತ್ರ ಮಾರುಕಟ್ಟೆಯಲ್ಲಿ ದೊರಕಲಿದೆ.

ಉಡುಪಿಯ ರಥಬೀದಿಯಲ್ಲಿನ ಪ್ರಸಿದ್ಧ ಜಿನಸು(ಗಿರಣಿ)ಅ೦ಗಡಿಯಾಗಿರುವ ಕೆ.ವಿ.ಪೈ ಎ೦ಡ್ ಸನ್ಸ್ ಅ೦ಗಡಿಗೆ ಈಗಾಗಲೇ ಈ ಧಾನ್ಯವು ಗ್ರಾಹಕರಿಗೆ ಧರಾಳವಾಗಿ ದೊರಕುತ್ತಿದೆ.

ಈ ಬಾರಿ ಈ ದೊಡ್ಡ ಅವಡೆ (ಬಗ್ಡೊ)ಕೆಜಿಗೆ 124/-ರೂ ,ಸಣ್ಣ ಅವಡೆ(ಬಗ್ಡೊ)ಕೆಜಿಗೆ 100/-ರೂ,ಕಪ್ಪು ಹೆಸರು ಕೆಜಿಗೆ 110/-ರೂ,ಉರುಳಿ ಕೆಜಿಗೆ  90/-ರೂ ಮತ್ತು ಊರಿನ ಅಳಸ೦ಡೆ ಕಾಳು ಕೆಜಿಗೆ 90/-ರೂ ದರವು ಬಿಗದಿಯಾಗಿದೆ.

ಈ ಧಾನ್ಯದಲ್ಲಿ ಬಹಳಷ್ಟು ಪೌಷ್ಠಿಕ ಅ೦ಶವಿರುವುದರಿ೦ದ ಈ ಧಾನ್ಯಕ್ಕೆ ಈ ಬಾರಿ ಬಹಳಷ್ಟು ಬೇಡಿಕೆ ಗ್ರಾಹಕರಾದ ನೀವು ಈ ಧಾನ್ಯವನ್ನು ಶೀಘ್ರ ಖರೀದಿಸಿ ಇದರ ಬಳಕೆಯನ್ನು ಮಾಡಿ.

kiniudupi@rediffmail.com

No Comments

Leave A Comment