Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಮೋದಿ ಕಟೌಟ್‌ ತಬ್ಬಿಕೊಂಡು, ಸೊಂಟ ಬಳುಕಿಸುತ್ತಾ ರೀಲ್ಸ್​​ ಮಾಡಿದ ಮಹಿಳೆ

ಎದೆ ಬಡಿತ ಜೋರಾಗಿದೆ ಎಂದು ಹಿಂದಿ ಹಾಡಿಗೆ ಮೋದಿ ಕಟೌಟ್‌ ತಬ್ಬಿಕೊಂಡು ಸೊಂಟ ಬಳುಕಿಸುತ್ತಾ ರೀಲ್ಸ್​​ ಮಾಡಿದ ಮಹಿಳೆಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವ ನೀಡುವ ಬದಲು ಈ ರೀತಿ ಅಸಭ್ಯವಾಗಿ ವರ್ತಿಸಿದ ಮಹಿಳೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಕಟೌಟ್‌ ತಬ್ಬಿಕೊಂಡು ರೀಲ್ಸ್​​

ಹೆಚ್ಚುತ್ತಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಮನಸೆಳೆಯಲು ರೈಲ್ವೆ ನಿಲ್ದಾಣ, ಪಡಿತರ ಅಂಗಡಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೇಂದ್ರ ಸರ್ಕಾರವು ಪ್ರಧಾನಿ ಅವರ ಕಟೌಟ್ ಇರುವ ‘ಸೆಲ್ಫಿ ಪಾಯಿಂಟ್‌’ಗಳನ್ನು ಸ್ಥಾಪಿಸಿದೆ. ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಚಾರಕ್ಕಾಗಿ ಜನರು ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಟೌಟ್‌ಗಳನ್ನು ಹಾಕಿದರೆ ಮಹಿಳೆಯೊಬ್ಬಳು ಮೋದಿ ಕಟೌಟ್‌ ಮುಂದೆ ಸೆಲ್ಫಿ ತೆಗೆಸಿಕೊಳ್ಳುವ ಬದಲು “ಆಜಾ ಸಜನ್ ಆಜಾ” ಎಂದು ಸೊಂಟ ಬಳುಕಿಸುತ್ತಾ ರೀಲ್ಸ್​​ ಮಾಡಿದ್ದಾಳೆ. ದೇಶದ ಪ್ರಧಾನಿಯನ್ನು ಅಪ್ಪಿಕೊಂಡು ಅಸಭ್ಯವಾಗಿ ನೃತ್ಯ ಮಾಡಿರುವುದು ಇದೀಗಾ ಭಾರೀ ಟೀಕೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಇದು ಉತ್ತಮ ನಿದರ್ಶನ. ಮಾಧುರಿ ದೀಕ್ಷಿತ್, ಸಂಜಯ್ ದತ್ ಮತ್ತು ಜಾಕಿ ಶ್ರಾಫ್ ನಟಿಸಿದ 1993 ರ ಸೂಪರ್ ಹಿಟ್ ಚಲನಚಿತ್ರ “ಖಲ್ನಾಯಕ್” ಹಾಡಿನ “ಆಜಾ ಸಜನ್ ಆಜಾ” ನಲ್ಲಿ ಮಹಿಳೆ ನೃತ್ಯ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು.. ಹಾಡು ಪ್ಲೇ ಆಗುತ್ತಿದ್ದಂತೆ ಮಹಿಳೆ ಪ್ರಧಾನಿ ಮೋದಿಯವರ ಕಟೌಟ್‌ನತ್ತ ಓಡಿ ಅದನ್ನು ತಬ್ಬಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ತನ್ನ ಅರೆಬರೆ ಮೈಯನ್ನು ಪ್ರದರ್ಶಿಸುತ್ತಾ ನೃತ್ಯ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

No Comments

Leave A Comment