Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್​ ರೆಡ್ಡಿ ರಾಜಿನಾಮೆ .

ಬೆಂಗಳೂರು : ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವ ಮುನ್ನವೇ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಹಿರಿಯ ಐಪಿಎಸ್​ ಅಧಿಕಾರಿ ಸಿ. ಹೆಚ್​ ಪ್ರತಾಪ್​ ರೆಡ್ಡಿ ಅವರು ಜು. 01 1964ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಸಿದರು. ಪ್ರತಾಪ್​ ರೆಡ್ಡಿ ಬಿ.ಟೆಕ್​ ಪದವೀಧರರು. ಇವರು 1991ರಲ್ಲಿ ಕರ್ನಾಟಕ ಕೆಡರ್​ನ ಐಪಿಎಸ್​ ಅಧಿಕಾರಿಯಾಗಿ ಕಾರ್ಯವನ್ನು ಆರಂಭಿಸಿದರು.

ಹಾಸನ ಜಿಲ್ಲೆಯಲ್ಲಿ ಸಹಾಯಕ ಸೂಪರಿಟೆಂಡೆಂಟ್​ ಆಗಿ ಕೆಲಸ ಆರಂಭಿಸಿದ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ, ಸಿಐಡಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ ಇವರು ಪ್ರಸ್ತುತ ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನೇನು ೨ ತಿಂಗಳಲ್ಲಿ ನಿವೃತ್ತಿ ಹೊಂದುವ ಅವರು ಆದರೆ ಅವರು ವೈಯಕ್ತಿಕ ಕಾರಣವನ್ನು ನೀಡಿ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಇದು ರಾಜ್ಯ ಪೊಲೀಸ್​ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರತಾಪ್ ​ ರೆಡ್ಡಿಯವರು ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಪಡೆದಿದ್ದು, ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಂಬೈ ಮತ್ತು ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಸೈಬರ್​ ಸೆಕ್ಯುರಿಟಿ ವಿಭಾಗದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದರು.ಕಮಲ್​ ಪಂತ ಅವರ ಬಳಿಕ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿ ಪ್ರತಾಪ್​ ರೆಡ್ಡಿಯವರನ್ನು ನೇಮಕ ಮಾಡಲಾಗಿತ್ತು.

No Comments

Leave A Comment