Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಚಿಲಿ ಕಾಡ್ಗಿಚ್ಚಿನಿಂದ 112ಕ್ಕೂ ಹೆಚ್ಚು ಮಂದಿಸಾವು, ತುರ್ತು ಪರಿಸ್ಥಿತಿ ಘೋಷಣೆ

ಚಿಲಿ: ಚಿಲಿಯಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಇದು ವಿನಾಶಕಾರಿಯಂತೆ ಹರಡುತ್ತಿದ್ದು ಈವರೆಗೆ 100 ಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದಾರೆ , ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಲಿಯ ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಸೇವೆಯು ಈವರೆಗೆ ಕನಿಷ್ಠ 112 ಜನರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದು, ಈ ಪೈಕಿ 32 ಶವಗಳನ್ನು ಗುರುತಿಸಲಾಗಿದ್ದು, 38 ಶವಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೇ 10 ಮೃತದೇಹಗಳನ್ನು ಈಗಾಗಲೇ ಸಂಬಂಧಿಕರಿಗೆ ತಲುಪಿಸಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಬೆಂಕಿ ನಂದಿಸಲು 19 ಹೆಲಿಕಾಪ್ಟರ್‌ಗಳು ಮತ್ತು 450 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾಡ್ಗಿಚ್ಚಿನಿಂದ ಸುಮಾರು 1,600 ಮನೆಗಳು ನಾಶವಾಗಿದ್ದು ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಧ್ಯ ಚಿಲಿಯ ವಾಲ್ಪಾರೈಸೊ ಪ್ರದೇಶದ ಹಲವು ಪ್ರದೇಶಗಳಲ್ಲಿ ಹೊಗೆ ಆವರಿಸಿದೆ. ಸಾವಿರಾರು ಜನರು ತಮ್ಮ ಮನೆಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈಗಾಗಲೇ ಚಿಲಿಯಲ್ಲಿ ಬೇಸಿಗೆ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ (104 ಡಿಗ್ರಿ ಫ್ಯಾರನ್‌ಹೀಟ್) ದಾಟಿದ್ದು, ಬೇಸಿಗೆಯ ಬಿಸಿಯ ಜೊತೆಗೆ, ಕಾಡ್ಗಿಚ್ಚು ಜನಜೀವನವನ್ನು ಸಂಕಷ್ಟಕ್ಕೆ ನೂಕಿದೆ.

No Comments

Leave A Comment