ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಬಿಜೆಪಿಯ ಹಿರಿಯ ಮುಖ೦ಡರು,ಆರ್ ಎಸ್ ಎಸ್ ಸ್ವಯ೦ಸೇವಕರಾಗಿದ್ದ, ಉದ್ಯಮಿ ಮಲ್ಪೆ ಸೋಮಶೇಖರ ಭಟ್ ನಿಧನ
ಉಡುಪಿ. ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಭೀಷ್ಮ ಪಿತಾಮಹ ಎಂದು ಕರೆಯಲ್ಪಡುವ ಉಡುಪಿ ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಪೆ ಸೋಮಶೇಖರ ಭಟ್ (89) ಭಾನುವಾರನಿಧನ ಹೊಂದಿದ್ದಾರೆ.
ಜನ ಸಂಘದ ಹಿರಿಯ ನಾಯಕರಾದ ಇವರು ಉಡುಪಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿರುತ್ತಾರೆ.ವರುಣ್ ಪೈಪಿಂಗ್ ಸಿಸ್ಟಮ್ ನ ಸ್ಥಾಪಕರಾಗಿರುವ ಇವರು ಜನಮಾನಸದಲ್ಲಿ ಸೋಮಣ್ಣ ಎಂದೇ ಪ್ರಸಿದ್ಧರು. ಡಾಕ್ಟರ್ ವಿ ಎಸ್ ಆಚಾರ್ಯರ ರಾಜಕೀಯ ಗುರುಗಳಾಗಿದ್ದರು. ಇವರು ಪತ್ನಿ, ಇಬ್ಬರು ಗಂಡು ಮಕ್ಕಳು, ಒಬ್ಬರು ಮಗಳನ್ನು ಅಗಲಿರುತ್ತಾರೆ.
1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 18 ತಿಂಗಳು ಬೆಂಗಳೂರಿನಲ್ಲಿ ಲಾಲಕೃಷ್ಣ ಅಡ್ವಾಣಿಯವರೊಂದಿಗೆ,ಸೆರೆವಾಸವನ್ನು ಅನುಭವಿಸಿದ್ದರು.ರಾಮಮಂದಿರದ ಕರಸೇವೆಯಲ್ಲಿ ಮುಂಚೂಣಿಯಲ್ಲಿದ್ದರು*ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕಡಿಯಾಳಿ ಇದರ ಸ್ಥಾಪಕ ಸದಸ್ಯರಾದ ಇವರು, ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ(ರಿ)ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಉಡುಪಿ ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿ ಇವರು ಕೊಡುಗೈ ದಾನಿಯಾಗಿದ್ದು ಇವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.