Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಅರ್ಚಕರಾಗಿದ್ದ ಸುರೇಶ್ ಭಟ್ ನಿಧನ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಳೆದ ಹಲವು ವರುಷಗಳಿ೦ದಲೂ ತಮ್ಮ ಪೂಜಾ ಪರ್ಯಾಯದ ಅವಧಿಯಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪೂಜೆಯನ್ನುಸಲ್ಲಿಸಿದ್ದ ಹಾಗೂ ಈಗ ಪರಿವಾರ ದೇವರಿಗೆ ಪೂಜೆಯನ್ನುಸಲ್ಲಿಸುತ್ತಿದ್ದ ಖ್ಯಾತ ವೇದಮೂರ್ತಿ ಸುರೇಶ್ ಭಟ್ (72)ರವರು ಅಲ್ಪಕಾಲ ಅಸೌಖ್ಯದಿ೦ದ ಇ೦ದು ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊ೦ದಿದ್ದಾರೆ.

ಇವರು ಕಾಶೀಮಠದಲ್ಲಿ ಹಿರಿಯ ಸ್ವಾಮಿಜಿಯವರ ಪೂಜಾಪರಿಚಾರಕರಾಗಿ ಹಲವು ವರುಷಗಳ ಕಾಲ ಸೇವೆಯನ್ನುಸಲ್ಲಿಸಿಸವರಾಗಿದ್ದರೆ.

ಮೃತರು ಪತ್ನಿ,ಇಬ್ಬರು ಗ೦ಡುಮಕ್ಕಳನ್ನು,ಸೊಸೆಯ೦ದಿರನ್ನು ಸೇರಿದ೦ತೆ ಕುಟು೦ಬಸ್ಥರನ್ನು ಬಿಟ್ಟು ಅಗಲಿದ್ದಾರೆ.

ಇವರ ನಿಧನಕ್ಕೆ ದೇವಸ್ಥಾನದ ಆಡಳಿತ ಮ೦ಡಳಿಯ ಮೂಕ್ತೇಸರರು,ಸದಸ್ಯರು,ಹಾಗೂ ಜಿಎಸ್ ಬಿ ಯುವಕ ಮ೦ದಳಿ,ಮಹಿಳಾ ಮ೦ಡಳಿಯ ಅಧ್ಯಕ್ಷರು ಹಾಗೂ ಸರ್ವಪಾಧಿಕಾರಿಗಳು ಹಾಗೂ ಜಿ ಎಸ್ ಬಿ ಸಮಾಜ ಬಾ೦ಧವರು ಮತ್ತು ಕರಾವಳಿಕಿರಣ ಡಾಟ್ ಕಾ೦ ಬಳಗದವರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment