Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ರಾಷ್ಟ್ರಧ್ವಜವನ್ನು ಯಾರು ವಿರೋಧಿಸುತ್ತಾರೋ ಅವರು ದೇಶದ್ರೋಹಿಗಳು ಅವರು ಶಾಸಕರಾಗಿರಲಿ,ವಿರೋಧ ಪಕ್ಷದ ನಾಯಕರೇ ಆಗಿರಲಿ ಕೂಡಲೇ ಅವರ ಸದಸ್ಯತ್ವ ರದ್ದುಗೊಳಿಸಬೇಕು- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಕಳೆದ ಎರಡು ಮೂರು ದಿನಗಳಿಂದ ಮಂಡ್ಯದಲ್ಲಿ ರಾಷ್ಟ್ರಧ್ವಜವನ್ನು ಆರಿಸಿದ ಬಗ್ಗೆ ಬಿಜೆಪಿಯ ವಿರೋಧ ಪಕ್ಷ ನಾಯಕರು ರಾಜ್ಯಾಧ್ಯಕ್ಷರು ಎಲ್ಲ ಬಿಜೆಪಿ ನಾಯಕರು ಹಾಗೂ ಶಾಸಕರುಗಳು ಅದನ್ನು ವಿರೋಧಿಸುತ್ತಾ ಬಂದು ರಾಷ್ಟ್ರಧ್ವಜವನ್ನು ಕೆಳಗಿಳಿಸಬೇಕು ಎಂಬ ಹಠದಿಂದ ಪ್ರತಿಭಟನೆಯನ್ನು ನಡೆಸುತ್ತಾ ಬರುತ್ತಿದ್ದಾರೆ ರಾಷ್ಟ್ರಧ್ವಜಕ್ಕೆ ಅಪಮಾನವನ್ನು ಮಾಡುತ್ತಿದ್ದಾರೆ.

ನಮ್ಮ ರಾಷ್ಟ್ರ ಧ್ವಜದ ಬಗ್ಗೆ ಹೀನಾಯವಾಗಿ ಮಾತನಾಡುತ್ತಾ ತಾಲಿಬಾನ್ ಧ್ವಜ ಎಂದು ಉಚ್ಚರಿಸಿ ನಮ್ಮ ದೇಶದ ರಾಷ್ಟ್ರ ಧ್ವಜಕ್ಕೆ ಅವಮಾನವನ್ನು ಮಾಡಿರುತ್ತಾರೆ ಕೂಡಲೆ ಇವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಿ ನಮ್ಮ ರಾಜ್ಯದ ರಾಜ್ಯಪಾಲರು ಇವರ ವಿಧಾನಸಭಾ ಸದಸ್ಯತ್ವವನ್ನು ಕೂಡಲೇ ರದ್ದುಗೊಳಿಸಬೇಕು ಹಿಂದುತ್ವವಿರಲಿ ಶ್ರೀರಾಮ ದೇವರು ಇರಲಿ ಇದು ಕೇವಲ ಬಿಜೆಪಿ ಯವರ ಸ್ವತ್ತಲ್ಲ ಇಡೀ ದೇಶದಲ್ಲಿರುವ ಎಲ್ಲಾ ಹಿಂದೂ ಧರ್ಮದವರು ಹಿಂದುತ್ವವನ್ನು ಗೌರವಿಸುತ್ತಾರೆ ಶ್ರೀರಾಮ ದೇವರನ್ನು ಪೂಜಿಸುತ್ತಾರೆ ಎಂಬುದನ್ನು ಈ ಬಿಜೆಪಿ ನಾಯಕರು ಪ್ರಪ್ರಥಮವಾಗಿ ತಿಳಿದುಕೊಳ್ಳಬೇಕಾಗಿದೆ.
ಕೇವಲ ಚುನಾವಣೆ ಗಿಮಿಕ್ಗೋಸ್ಕರ ಹಿಂದುತ್ವಕ್ಕೆ ಅಪಮಾನವನ್ನು ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ಹನುಮಾನ್ ಧ್ವಜವನ್ನು ಹಾರಿಸಲು ಹೇಳಿಕೆ ನೀಡಿದ ಉಡುಪಿಯ ಶಾಸಕರು ಡೋಂಗಿ ಪರಶುರಾಮನ ಸೃಷ್ಟಿಕರ್ತನ ಬಗ್ಗೆ ಏಕೆ ಮಾತನಾಡುವುದಿಲ್ಲ ಪರಶುರಾಮರು ಹಿಂದೂ ದೇವರಲ್ಲವೇ ತಮಗೆ ನಿಜವಾಗಿಯೂ ಹಿಂದುತ್ವದ ಬಗ್ಗೆ ಗೌರವ ಇದ್ದರೆ ಡೋಂಗಿ ಪರಶುರಾಮನ ಮೂರ್ತಿಯನ್ನು ಸೃಷ್ಟಿಸಿದಂತ ತುಳುನಾಡಿನ ಜನತೆಗೆ ಮೋಸ ಮಾಡಿದಂತಹ ದುಷ್ಟರನ್ನು ಕೂಡಲೇ ಬಂಧಿಸುವಂತೆ ಸರಕಾರವನ್ನು ಒತ್ತಾಯಿಸಲಿ ಅದನ್ನು ಬಿಟ್ಟು ತಾನೇ ದೊಡ್ಡ ಪರಮ ಹಿಂದುತ್ವವಾದಿ ಎಂಬುದನ್ನು ಬಿಟ್ಟು ಹಿಂದುತ್ವ ಎಂದರೆ ಏನು ಎಂಬುದನ್ನು ತಾವು ತಿಳಿದುಕೊಂಡು ನಮ್ಮ ಜಾತ್ಯತೀತ ಭಾರತ ದೇಶದ ಸಂವಿಧಾನಕ್ಕೆ ತಲೆಬಾಗಿ ಕೇಂದ್ರದ ಮೋದಿಯ ಸರಕಾರದ ಬೆಲೆ ಏರಿಕೆಯ ನೀತಿಯ ಬಗ್ಗೆ ಧ್ವನಿ ಎತ್ತಿ ನಮ್ಮ ದೇಶದ ಬಡವರ ಮಧ್ಯಮ ವರ್ಗದ ಕಾರ್ಮಿಕರ ರೈತರುಗಳ ಕಷ್ಟವನ್ನು ನಿವಾರಿಸುವಂತಹ ಕೆಲಸವನ್ನು ಮಾಡಿದರೆ ಒಳಿತು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ

No Comments

Leave A Comment