Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಉಡುಪಿ: ಕಿದಿಯೂರ್ ಹೊಟೇಲ್‌ನ ಶ್ರೀ ನಾಗ ಸಾನ್ನಿಧ್ಯ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಸಂಭ್ರಮದಿ೦ದ ಸ೦ಪನ್ನ….

ಉಡುಪಿ:ಫೆ 01, ಕಿದಿಯೂರ್ ಹೊಟೇಲ್‌ನ ಕಾರಣಿಕ ಶ್ರೀ ನಾಗಸಾನ್ನಿಧ್ಯ ನಡೆಯುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಜೋತಿಷ ವಿ। ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆಯೊಂದಿಗೆ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಬುಧವಾರ ಪ್ರಯುಕ್ತ ಬುಧವಾರ ಶ್ರೀನಾಗ ದೇವರಿಗೆ ವಿಶೇಷ ಅಲಂಕಾರ, ಅಷ್ಟೋತ್ತರ ಶತಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮದೊಂದಿಗೆ ಅನ್ನಸಂತರ್ಪಣೆ ನೆರವೇರಿತು.

ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪಲ್ಲಪೂಜೆ ನೆರವೇರಿಸಿದರು. ಪ್ರಸನ್ನ ಪೂಜೆ, ವಿವಿಧ ಪೂಜೆ ಮತ್ತು ಆರಾಧನೆಗಳು, ಕಾಶೀ ವಾರಾಣಸಿಯಿಂದ ತರಿಸಲಾದ ಪವಿತ್ರ ಗಂಗಾಜಲವನ್ನು ಭಕ್ತರಿಗೆ ಸಂಪ್ರೋಕ್ಷಣೆ ನಡೆಸಿ, (ನಾಗರಕ್ಷೆ) ದಾರ ವಿತರಿಸಲಾಯಿತು. ಸಂಜೆ ಹಾಲಿಟ್ಟು ಸೇವೆ, ನಾಗಮಂಡಲದ ಮಂಟಪದಲ್ಲಿ ವಾರಾಣಸಿಯಿಂದ ಬಂದ ಪರಿಣತ ಅರ್ಚಕ ವೃಂದದವರಿಂದ ಅಕರ್ಷಕ ಸಾಮೂಹಿಕ ಗಂಗಾರತಿ ನಡೆಯಿತು.

ಕಿದಿಯೂರ್ ನಾಗಮಂಡಲೋತ್ಸವ ಸಂದರ್ಭದಲ್ಲಿ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ವಿಶೇಷವಾಗಿ ವಿ। ಪವನಾ ಬಿ. ಆಚಾರ್ ಮಣಿಪಾಲ ಅವರ ನಿರ್ದೇಶನದಲ್ಲಿ ಏಕಕಾಲದಲ್ಲಿ 108 ವೀಣೆಗಳ ವಾದನವು ಹಳದಿ ಮತ್ತು ಕೆಂಪು ಬಣ್ಣದ ಸೀರೆಯ ಸಮವಸ್ತ್ರಧಾರಿ 108 ವೈಣಿಕರು ವೀಣಾ ವಾದನದಿಂದ ಸ್ತೋತ್ರಗಳನ್ನ ಮಂತ್ರಮುಗ್ಧಗೊಳಿಸಿದರು. ಕಛೇರಿಯಲ್ಲಿ ರಿದಂ ಪ್ಯಾಡ್, ತಾಳ, ತಂಬೂರಿ ವಾದಕರು ಸಾಥ್ ನೀಡಿದ್ದರು. ನಾಗದೇವರ 108 ಸ್ತೋತ್ರಗಳು, ನವನಾಗ ಸ್ತುತಿ ಸೇರಿದಂತೆ ನಾಗದೇವರ ವಿವಿಧ ನಾಮಾವಳಿಗಳನ್ನು ವಿಶೇಷವಾಗಿ ಪ್ರಸ್ತುತಪಡಿಸಿದರು.

ಆಯೋಜನ ಸಮಿತಿ ಕಾರ್ಯಾಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ ಸಂಘಟನಾಧ್ಯಕ್ಷ ಶಾಸಕ ಯಶ್ಪಾಲ್ ಎ. ಸುವರ್ಣ, ಉಪಾಧ್ಯಕ್ಷರಾದ ಗಣೇಶ್ ರಾವ್, ಉದಯ ಕುಮಾರ್ ಶೆಟ್ಟಿ ಕಿದಿಯೂರು, ಈ ಹಿರಿಯಣ್ಣಟಿ. ಕಿದಿಯೂರು, ಹರಿಯಪ್ಪ ಕೋಟ್ಯಾನ್, – ರಮೇಶ್ ಕಾಂಚನ್, ನಯನಾ ಗಣೇಶ್, ಗೌರವ ಕ ಮಾರ್ಗದರ್ಶಕರಾದ ಶಶಿಧರ ಶೆಟ್ಟಿ ಎರ್ಮಾಳ್, ಡಾ. ವಿಜಯೇಂದ್ರ ವಸಂತ ರಾವ್, ಜಯ ಸಿ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್, ಕೋಶಾಧಿಕಾರಿ ವಿಲಾಸ್ ಕುಮಾರ್, ಜತೆಕಾರ್ಯದರ್ಶಿಗಳಾದ ರಮೇಶ್ ಕಿದಿಯೂರು, ಪ್ರಕಾಶ್ ಜತ್ತನ್, ಜತೆ ಕೋಶಾಧಿಕಾರಿ ದಿನಕರ, ಸಮಿತಿ ಸದಸ್ಯರು, ಹಿತೈಷಿಗಳು, ಗಣ್ಯರು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಕಾರ್ಯಕರ್ತರು, ಸ್ವಯಂಸೇವಕರು, ಸಿಬಂದಿ, ಸಾವಿರಾರು ಭಕ್ತರು ಭಾಗವಹಿಸಿದ್ದರು.

No Comments

Leave A Comment