Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನಟಿ ಪೂನಂ ಪಾಂಡೆ ನಿಧನ: 32 ವರ್ಷಕ್ಕೆ ಇಹಲೋಕ ತ್ಯಜಿಸಿದ ಕಾಂಟ್ರವರ್ಸಿ ಕ್ವೀನ್!

ಮುಂಬೈ: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

ಗರ್ಭಕೋಶದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್‌ ಖಚಿತಪಡಿಸಿದ್ದಾರೆ. ಪೂನಮ್‌ ಪಾಂಡೆ ಅವರ ಮ್ಯಾನೇಜರ್‌ ಹಾಗೂ ಅವರ ಟೀಮ್‌ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್‌ ಮಾಡಿದ್ದಾರೆ.

“ಇಂದಿನ ಬೆಳಗ್ಗೆಯು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವ್ಯಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪೂನಮ್‌ ಪಾಂಡೆ ಅವರು ಉತ್ತರಪ್ರದೇಶದ ಕಾನ್ಪುರದ ಮನೆಯಲ್ಲಿ ನಿಧನರಾಗಿದ್ದಾರೆ. ಅಂತ್ಯ ಸಂಸ್ಕಾರ ಕುರಿತಾದ ಇತರ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ. ತಮ್ಮ ವಿವಾದಿತ ಮಾತುಗಳಿಂದಲೇ ಪ್ರಖ್ಯಾತಿ ಪಡೆದಿದ್ದ ಪೂನಮ್‌ ಪಾಂಡೆ, ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಫಾಲೋವರ್‌ಗಳನ್ನು ಹೊಂದಿದ್ದರು.

ಬೋಲ್ಡ್‌ ಫೋಟೊಗಳು, ಬೋಲ್ಡ್‌ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದ ಪೂನಂ ಪಾಂಡೆ ಅವರು ಬಿಹಾರದವರು. ಬಿಹಾರದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ಇವರು ಮೊದಲು ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿದರು. 2013ರಲ್ಲಿ ನಶಾ ಎಂಬ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಪೂನಂ ಪಾಂಡೆ, ಭೋಜ್‌ಪುರಿಯ ಅದಾಲತ್‌, ತೆಲುಗಿನಲ್ಲಿ ಮಾಲಿನಿ & ಕೊ., ಹಿಂದಿಯ ಜಿಎಸ್‌ಟಿ-ಗಲ್ತಿ ಸಿರ್ಫ್‌ ತುಮ್ಹಾರಿ ಹಾಗೂ ದಿ ಜರ್ನಿ ಆಫ್‌ ಕರ್ಮ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ ಛಾಪು ಇದೆ. ಅವರು 2014ರಲ್ಲಿ ಬಿಡುಗಡೆಯಾದ ಲವ್‌ ಈಸ್‌ ಪಾಯ್ಸನ್‌ ಕನ್ನಡ ಸಿನಿಮಾದಲ್ಲಿ ಹಾಡೊಂದಿಗೆ ಹೆಜ್ಜೆ ಹಾಕಿದ್ದರು. 2011ರಲ್ಲಿ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದರೆ ತಂಡ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು.

ಪೂನಂ ಪಾಂಡೆ ಕನ್ನಡ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಲವ್ ಈಸ್ ಪಾಯಿಸನ್’ ಎಂಬ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದಾರೆ.  ಇದರ ಜೊತೆಗೆ ಹಲವು ಬಾಲಿವುಡ್ ಸಿನಿಮಾಗಳಲ್ಲಿಯೂ ಪೂನಂ ನಟಿಸಿದ್ದಾರೆ.

No Comments

Leave A Comment