Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕಿದಿಯೂರು ಕಾರ್ಣಿಕದ ಶ್ರೀನಾಗ ಸನ್ನಿಧಿಯ ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ 5ನೇ ದಿನ’ ನಾಳೆ ಜ.30″ಅಷ್ಟಪವಿತ್ರ ನಾಗಮಂಡಲ ಉತ್ಸವ”

ಉಡುಪಿ: ಜ.29; ನಗರದ ಪ್ರಸಿದ್ಧ ಕಿದಿಯೂರು ಹೋಟೆಲಿನ ಕಾರ್ಣಿಕದ ಶ್ರೀನಾಗ ಸನ್ನಿಧಿಯ ಅಷ್ಟಪವಿತ್ರ ನಾಗಮಂಡಲ ಉತ್ಸವದ ಐದನೇ ದಿನದ ಕಾರ್ಯಕ್ರಮ ನಾಳೆ (ಜ.30) ನಡೆಯಲಿದೆ.

ನಾಳೆ ಬೆಳಗ್ಗೆ 7 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬೆಳಿಗ್ಗೆ 7 ಗಂಟೆಯಿಂದ ಶ್ರೀನಾಗ ಸನ್ನಿಧಿಯಲ್ಲಿ ಸರ್ಪ ಸೂಕ್ತ ಹವನ, ತತ್ವ ಕಲಾಶಾರಾಧನೆ, ತತ್ವ ಹೋಮ, ಶ್ರೀನಾಗ ದೇವರಿಗೆ ಹಾಲು ಹಾಗೂ ಸಿಯಾಳಗಳಿಂದ ವಿಶೇಷ ಕ್ಷೀರ ನಾರಿಕೇಳ ಅಭಿಷೇಕ, ತತ್ವ ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ 5 ಗಂಟೆಯಿಂದ ಬ್ರಹ್ಮಕಲಶ ಮಂಡಲ ಲೇಖನ, ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮ ಕುಂಭ ಸ್ಥಾಪನೆ, ಶ್ರೀ ನಾಗದೇವರಿಗೆ ರಾತ್ರಿ ಪೂಜೆ ನಡೆಯಲಿದೆ. ಸಂಜೆ 5:30 ರಿಂದ ನಾಗಮಂಡಲ ಜರುಗುವ ವೇದಿಕೆಯ ಮಂಟಪ ಸಂಸ್ಕಾರ, ವಾಸ್ತು ಹೋಮ, ರಾಕ್ಷೋಘ್ನ ಹವನ, ದಿಕ್ಪಾಲಕ ಬಲಿ ನಡೆಯಲಿದೆ.

ಬಳಿಕ ಸಂಜೆ 6 ಗಂಟೆಯಿಂದ ಶ್ರೀವಿಶ್ವೇಶ್ವರ ತೀರ್ಥ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಯತಿವರೇಣ್ಯರಿಗೆ ತುಲಾಭಾರ ಸೇವೆ ಹಾಗೂ ವಿವಿಧ ರಂಗದ ಸಾಧಕರಿಗೆ ಸನ್ಮಾನ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಜ್ಯೋತಿಷ್ಯರಾದ ವಿದ್ವಾನ್ ಶ್ರೀಪಂಜ ಭಾಸ್ಕರ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಾಗೂ ಶ್ರೀ ಭುವನೇಂದ್ರ ಕಿದಿಯೂರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬಿ ವಿಜಯ ಬಲ್ಲಾಳ್, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಕೆ. ಉದಯಕುಮಾರ್ ಶೆಟ್ಟಿ, ಮುಂಬೈಯ ಅವರ್ಸೇಕರ್ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಕಿಶೋರ್ ಕೃಷ್ಣ ಅವರ್ಸೇಕರ್, ಮುಂಬೈ ಉದ್ಯಮಿ ಸುರೇಂದ್ರ ಕಲ್ಯಾಣಪುರ, ಉಜ್ವಲ್ ಡೆವಲಪರ್ಸ್ ಉಡುಪಿ ಇದರ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ ಶೆಟ್ಟಿ, ಕೋಟ ಉದ್ಯಮಿ ಆನಂದ ಸಿ ಕುಂದರ್, ಕೊಡವೂರು ಉದ್ಯಮಿ ಆನಂದ ಪಿ ಸುವರ್ಣ, ಸಾಯಿರಾದ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹರ್ ಎಸ್ ಶೆಟ್ಟಿ, ಬಂಟರ ಸಂಘ ಮಸ್ಕತ್ ಓಮನ್ ಇದರ ಅಧ್ಯಕ್ಷ ಶಶಿಧರ್ ಶೆಟ್ಟಿ ಮಲ್ಲಾರು, ಶ್ರೀದೇವಿ ಚಿಟ್ ಫಂಡ್ ಮಲ್ಪೆ ಇದರ ಎಂ.ಎಸ್ ಭಟ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ್ ಕಲ್ಕೂರ, ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ ದುಬೈ ಇದರ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಡೈಜಿವಲ್ರ್ಡ್ ಮೀಡಿಯಾ ಸಂಸ್ಥಾಪಕ ವಾಲ್ಟರ್ ನಂದಳಿಕೆ ಭಾಗವಹಿಸಲಿದ್ದಾರೆ. ಬಳಿಕ ರಾತ್ರಿ 8:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಾಪುವಿನ ರಂಗತರಂಗ ಕಲಾವಿದರಿಂದ “ಅಧ್ಯಕ್ಷೆರ್” ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

No Comments

Leave A Comment