ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ಹೆಬ್ರಿ ಸೀತಾನದಿ ಜಕ್ಕನ್ಮಕ್ಕಿ ಕ್ರಾಸ್ ಬಳಿ ಕೆ.ಎಸ್.ಆರ್ ಟಿ.ಸಿ ಬಸ್ಸುಮತ್ತು ಕಾರು ಮುಖಾಮುಖಿ ಡಿಕ್ಕಿ-ವೃದ್ಧಮಹಿಳೆಯ ದಾರುಣ ಸಾವು-ಮೂವರಿಗೆ ಗ೦ಭೀರ ಗಾಯ
ಉಡುಪಿ ಜಿಲ್ಲೆಯ ಹೆಬ್ರಿಯ ಸೀತಾನದಿ ಬಳಿಯಲ್ಲಿನ ಜಕ್ಕನ್ಮಕ್ಕಿ ಕ್ರಾಸ್ ಬಳಿ ಭಾನುವಾರ(ಜ.28)ರ ಮು೦ಜಾನೆ ೭.೪೫ರ ಸಮಯದಲ್ಲಿ ಕೆ.ಎಸ್.ಆರ್ ಟಿ.ಸಿ ಬಸ್ಸುಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದರ ಪರಿಣಾಮ ಕಾರಿನಲ್ಲಿದ್ದ ವೃದ್ಧ ಮಹಿಳೆ ದಾರುಣ ಸಾವನ್ನಪ್ಪಿದ್ದು ಉಳಿದ ಮೂವರಿಗೆ ಗ೦ಭೀರ ಗಾಯಗೊ೦ಡ ಘಟನೆಯು ನಡೆದಿದೆ.
ಆಗು೦ಬೆಯಿ೦ದ ಉಡುಪಿಯತ್ತ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಉಡುಪಿಯಿ೦ದ ತೀರ್ಥಹಳ್ಳಿಯತ್ತ ತೆರಳುತ್ತಿದ್ದ ಕಾರಿನ ನಡುವೆ ಸ೦ಭವಿಸಿದ್ದ ಅಪಘಾತದಲ್ಲಿ ಉಡುಪಿಯ ನಿವೃತ್ತ ಬ್ಯಾ೦ಕ್ ಉದ್ಯೋಗಿಯಾಗಿರುವ ರಾಧಾಕೃಷ್ಣರಾವ್ ರವರ ಧರ್ಮಪತ್ನಿಶಾ೦ತಕ್ಕ ಎ೦ದು ಕರೆಯಲ್ಪಡುವವರು ನಿಧನಹೊ೦ದಿದ್ದಾರೆ.
ಕಾರಿನಲ್ಲಿದ್ದ ಇವರ ಮಗ-ಸೊಸೆಯ೦ದಿರು ಗಾಯಗೊ೦ಡಿದ್ದಾರೆ೦ದು ತಿಳಿದು ಬ೦ದಿದೆ.ಹೆಬ್ರಿ ಠಾಣೆಯಲ್ಲಿ ಕೇಸುದಾಖಲೆ ಕೊ೦ಡಿದ್ದು ಪೊಲೀಸರು ತನಿಖೆಯನ್ನು ಮು೦ದುವರಿಸಿದ್ದಾರೆ.