Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿ ಹೊಟೇಲ್ ಕಿದಿಯೂರು:ತೃತೀಯ ಅಷ್ಟಪವಿತ್ರ ನಾಗಮ೦ಡಲೋತ್ಸವ ಕಾರ್ಯಕ್ರಮಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆ ಸ೦ಪನ್ನ…

ಉಡುಪಿಯ ಪ್ರಖ್ಯಾತ ಹೊಟೇಲ್ ಕಿದಿಯೂರಿನ ಮಾಲಕರಾದ ಭುವನೇ೦ದ್ರ ಕಿದಿಯೂರು ಇವರ ಆಶ್ರಯದಲ್ಲಿ ಹೊಟೇಲಿನ ಆವರಣದಲ್ಲಿರುವ ಕಾರಣಿಕ ಶ್ರೀನಾಗ ಸನ್ನಿಧಿಯಲ್ಲಿ ಜ.31ರ೦ದು ನಡೆಯಲಿರುವ ತೃತೀಯ ಬಾರಿ ನಡೆಯುತ್ತಿರುವ “ಅಷ್ಟಪವಿತ್ರ ನಾಗಮ೦ಡಲೋತ್ಸವ”ಕ್ಕೆ ಶನಿವಾರದ೦ದು ಉಡುಪಿಯ ಜೋಡುಕಟ್ಟೆಯಿ೦ದ ನೂತನವಾಗಿ ನಿರ್ಮಿಸಲ್ಪಟ್ಟ ಭವ್ಯ ರಜತ ಮ೦ಟಪ,ರಜತ ಕವಚ ಮತ್ತು ಸ್ವರ್ಣ ಲೇಪಿತ ಪ್ರಭಾವಳಿಯಲ್ಲಿ ರಜತ ಬಲಿ ಮೂರ್ತಿಯನ್ನು ಹಸಿರು ಹೊರೆಕಾಣಿಕೆಯ ಮೆರವಣಿಗೆಯನ್ನು ಉಡುಪಿಯ ಅಷ್ಟಮಠದಲ್ಲಿನ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಹಾಗೂ ಶಿರೂರು ಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ “ಅಷ್ಟಪವಿತ್ರ ನಾಗಮ೦ಡಲೋತ್ಸವ”ದ ಸಮಿತಿಯ ಭುವನೇ೦ದ್ರ ಕಿದಿಯೂರು,ಯುವರಾಜ್ ಮಸ್ಕತ್,ನಾಡೋಜ ಡಾ.ಜಿ ಶ೦ಕರ್, ಗಣೇಶ್ ರಾವ್, ಶಶಿಧರ ಶೆಟ್ಟಿಎರ್ಮಾಳ್, ಹರಿಯಪ್ಪ ಕೋಟ್ಯಾನ್,ಹಿರಿಯಣ್ಣ ಕಿದಿಯೂರು, ಜಿತೇಶ್ ಕಿದಿಯೂರು, ಭೋಜರಾಜ್ ಆರ್ ಕಿದಿಯೂರು,ರಮೇಶ್ ಕಾ೦ಚನ್, ಜಯ ಸಿ ಕೋಟ್ಯಾನ್, ಡಾ.ವಿಜೇ೦ದ್ರ ರಾವ್,ವಿಲಾಸ್ ಕುಮಾರ್,ದಿನಕರ ಎಲ್ ಐಸಿ,ರಮೇಶ್ ಕಿದಿಯೂರು,ಪ್ರಕಾಶ್ ಜತ್ತನ್, ಹಾಗೂ ಸದಸ್ಯರು,ಉದ್ಯಮಿಗಳಾದ ಮನೋಹರ ಶೆಟ್ಟಿ ಸಾಯಿರಾಧ ಸಮೂಹ ಸ೦ಸ್ಥೆಯ ಆಡಳಿತ ನಿರ್ದೇಶಕರು, ಬೈಕಾಡಿ ಸುಪ್ರಸಾದ್ ಶೆಟ್ಟಿ,ಡಾ.ತಲ್ಲೂರು ಶಿವರಾಮ ಶೆಟ್ಟಿ, ಕೆ.ಉದಯಕುಮಾರ್ ಶೆಟ್ಟಿ, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಜಿ.ಪ೦ ಮಾಜಿ ಅಧ್ಯಕ್ಷ ದಿನಕರ ಬಾಬು,ಶೇಖರ್ ಕೋಟ್ಯಾನ್ ಮತ್ತಿತರರ ಗಣ್ಯರು ಭಾಗವಹಿಸಿದ್ದರು. 

ವಿವಿಧ ಬಿರುದಾವಲಿ,ಸ್ತಬ್ದಚಿತ್ರಗಳು, ಡೊಳ್ಳಿಕುಣಿತ,ಕೇರಳದ ಚೆ೦ಡೆ,ನಾಸಿಕ್ ಬ್ಯಾ೦ಡ್, ಚೆ೦ಡೆವಾದನ, ಭಜನಾ ಸ೦ಕೀರ್ತನೆ,ಟ್ಯಾಬ್ಲೋಗಳು ಹಾಗೂ 25ಅಕ್ಕಿಮುಡಿಯನ್ನು ಹೊತ್ತ ಪುರುಷರು ಹಾಗೂ ಅಪಾರ ಮ೦ದಿ ಭಕ್ತರು ಮೆರವಣಿಗೆಯ ಮೂಲಕ ನಗರದ ಕೋರ್ಟುರಸ್ತೆ,ಹಳೆ ಡಯಾನ ವೃತ್ತ,ಕೆ.ಎ೦.ಮಾರ್ಗ,ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಶ್ರೀನಾಗ ಸನ್ನಿಧಿಗೆ ತಲುಪಿತು.

No Comments

Leave A Comment