Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಬಿಜೆಪಿ ಸೇರ್ಪಡೆಯಾಗುವಂತೆ ಒತ್ತಡವಿದೆ, ಆದರೆ, ನಾನು ಬಿಜೆಪಿಗೆ ಹೋಗಲ್ಲ; ಲಕ್ಷ್ಮಣ್ ಸವದಿ

ಬೆಳಗಾವಿ: ಬಿಜೆಪಿ ಸೇರ್ಪಡೆಯಾಗುವಂತೆ ಒತ್ತಡವಿದೆ. ಆದರೆ, ನಾನು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಲ್ಲ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜಗದೀಶ್ ಶೆಟ್ಟರ್ ಒಟ್ಟಿಗೆ ನಿರ್ಧಾರ ಮಾಡಿ ಕಾಂಗ್ರೇಸ್ ಗೆ ಪಕ್ಷಕ್ಕೆ ಸೇರ್ಪಡೆ ಆಗಿದ್ದಲ್ಲ. ನಾನು ಮೊದಲು ಬಂದೆ. ಟಿಕೆಟ್ ಸಿಗದ ಕಾರಣ ನಂತರ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಬಂದರು. ಯಾಕೆ ಇದೀಗ ಬಿಜೆಪಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ನಾನು ಅವರು ಸ್ನೇಹಿತರು. ದಿನ ನಾವಿ‌ಬ್ಬರೂ ಮಾತನಾಡುತ್ತೇವೆ. ಆದರೆ ಅವರು ಈ ನಿರ್ಧಾರ ಮಾಡುತ್ತಾರೆಂದು ಗೊತ್ತಿರಲಿಲ್ಲ. ನಾನೂ ಕೂಡ ಶೆಟ್ಟರ್ ರೀತಿಯಲ್ಲೇ ಬಿಜೆಪಿ ಸೇರ್ಪಡೆಗೊಳ್ಳುತ್ತೇನೆಂಬುದು ಸುಳ್ಳು. ಅಥಣಿಯ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಅವರಿಗೆ ದ್ರೋಹ ಮಾಡುವುದಿಲ್ಲ ಎಂದು ತಿಳಿಸಿದರು.ಬಿಜೆಪಿಗೆ ಸೇರ್ಪಡೆಯಾಗುವಂತೆ ಒತ್ತಡ ಬರುತ್ತಿರುವುದು ನಿಜ. ಲೋಕಸಭೆ ಚುನಾವಣಾ ಹಿನ್ನೆಲೆ ಅವರಿಗೆ (ಬಿಜೆಪಿ) ನಮ್ಮ ಅನಿರ್ವಾಯತೆ ಇದೆ. ಹಾಗಾಗಿ ಸಂಪರ್ಕ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿನ ಹಲವಾರು ಹಿರಿಯ ನಾಯಕರು ಮತ್ತು ಸ್ನೇಹಿತರು ನನ್ನನ್ನು ಪಕ್ಷಕ್ಕೆ ಮರಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ, ನನ್ನ ನಿರ್ಗಮನದ ಪರಿಣಾಮ ಏನು ಎಂಬುದು ಬಿಜೆಪಿ ಇದೀಗ ತಿಳಿದಿದೆ. ಹೀಗಾಗಿ ನಾನು ಪಕ್ಷಕ್ಕೆ ಮರಳಬೇಕೆಂದು ಬಯಸುತ್ತಿದ್ದಾರೆ. ಆದರೆ, ನಾನು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

No Comments

Leave A Comment