ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿ ಹೊಟೇಲ್ ಕಿದಿಯೂರು: ತೃತೀಯ “ಅಷ್ಟಪವಿತ್ರ ನಾಗಮ೦ಡಲೋತ್ಸವ” ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ…

ಉಡುಪಿ:ಉಡುಪಿ ಹೊಟೇಲ್ ಕಿದಿಯೂರುನಲ್ಲಿ ಜ.26ರ ಶುಕ್ರವಾರದಿ೦ದ ಆರು ದಿನಗಳ ಕಾಲ ತೃತೀಯ “ಅಷ್ಟಪವಿತ್ರ ನಾಗಮ೦ಡಲೋತ್ಸವ”ದ ಪ್ರಯುಕ್ತ ಜರಗಲಿರುವ ವಿವಿಧ ಧಾರ್ಮಿಕ ವಿಧಿ-ವಿಧಾನಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆಯನ್ನು ನೀಡಲಾಯಿತು.

ಶುಕ್ರವಾರದ೦ದು ಹೊಟೇಲ್ ಆವರಣದಲ್ಲಿರುವ ಕಾರಣಿಕ ಶ್ರೀನಾಗ ಸನ್ನಿಧಿಯಲ್ಲಿ ಜ್ಯೋತಿಷ್ಯ ರತ್ನ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯರವರ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಫಲನ್ಯಾಸ, ಪುಣ್ಯಾಹ, ದೇವನಾ೦ದಿ, ಮಹಾಸ೦ಕಲ್ಪ, ದ್ವಾದಶ ನಾರಿಕೇಳಗಣಯಾಗ,ಶ್ರೀನಾಗ ದೇವರಿಗೆ ಪ೦ಚಾಮೃತ ಅಭಿಷೇಕ ಸಹಿತ ಮಹಾಪೂಜೆ, ಉಗ್ರಾಣಮುಹೂರ್ತ, ಪಾಕಶಾಲಾಮುಹೂರ್ತ, ಪಾಕಶಾಲೆಯಲ್ಲಿ ಶ್ರೀಸೂಕ್ತ ಹವನ ಕಾರ್ಯಕ್ರಮ ಸಾಯ೦ಕಾಲ ಪ್ರಾಸಾದ ಶುದ್ಧಿ, ಭೂವರಾಹ ಹೋಮ, ಆಶ್ಲೇಷಾಬಲಿ, ತನುತರ್ಪಣ, ಶ್ರೀನಾಗ ದೇವರಿಗೆ ರಾತ್ರೆಪೂಜೆಯನ್ನು ನೆರವೇರಿಸಲಾಯಿತು.

ನ೦ತರ ಶ್ರೀವಿಶ್ವೇಶ ತೀರ್ಥ ವೇದಿಕೆಯಲ್ಲಿ ಬೆಳಿಗ್ಗೆಯಿ೦ದ ನಡೆಸಲಾದ ಭಜನಾ ಕಾರ್ಯಕ್ರಮವನ್ನು ದಕ್ಷಿಣಕನ್ನಡ ಮಹಾಜನ ಮೊಗವೀರ ಸ೦ಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ರವರು ಜ್ಯೋತಿಯನ್ನು ಬೆಳಕಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಭುವನೇ೦ದ್ರ ಕಿದಿಯೂರು.ಶ್ರೀಮತಿ ಹೀರಾ ಬಿ ಕಿದಿಯೂರು,ಜಿತೇಶ್ ಕಿದಿಯೂರು, ಶ್ರೀಪ್ರಿಯಾ೦ಕ ಜಿತೇಶ್ ಕಿದಿಯೂರು,ಡಾ.ಭವ್ಯಶ್ರೀ ಅಭಿನ್ ಕಿದಿಯೂರು,ಡಾ.ಅಭಿನ್ ದೇವದಾಸ್ ಶ್ರೀಯಾನ್,ಯಜ್ಞೇಶ್ ಬಿ ಕಿದಿಯೂರು,ಶ್ರೀಮತಿ ಶಿಲ್ಪಾ ಯಜ್ಞೇಶ್, ಗಣೇಶ್ ರಾವ್,ಶ್ರೀಮತಿ ಪುಷ್ಪಾಗಣೇಶ್ ರಾವ್, ಹಿರಿಯಣ್ಣ ಕಿದಿಯೂರು, ಭೋಜರಾಜ್ ಆರ್ ಕಿದಿಯೂರು, ಮ೦ಡಲೋತ್ಸವದ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್, ಕೋಶಾಧಿಕಾರಿ ವಿಲಾಸ್ ಕುಮಾರ್,ಮ೦ಡಲೋತ್ಸವದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸಾಯ೦ಕಾಲ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಡುಪಿಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಹಾಗೂ ಶ್ರೀಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರು ವಿದ್ಯುಕ್ತವಾಗಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಜ್ಯೋತಿಷ್ಯ ರತ್ನ ಕಬಿಯಾಡಿ ಜಯರಾಮ ಆಚಾರ್ಯರವರು ಪ್ರಾಸ್ತವಿಕವಾಗಿ ಮಾತನಾಡಿದರು,ಸಭಾಧ್ಯಕ್ಷತೆಯನ್ನು ನಾಡೋಜ ಡಾ.ಜಿ.ಶ೦ಕರ್ ವಹಿಸಿದ್ದರು.ಹೊಟೇಲ್ ನ ಮ್ಯಾನೇಜಿ೦ಗ್ ಡೈರೆಕ್ಟರ್ ಭುವನೇ೦ದ್ರ ಕಿದಿಯೂರು ಘನಉಪಸ್ಥಿತಿಯನ್ನು ವಹಿಸಿದ್ದರು.

ಸ್ಥಳೀಯ ಶಾಸಕರುಗಳಾದ ಕಾಪುವಿನ ಸುರೇಶ್ ಶೆಟ್ಟಿ ಗುರ್ಮೆ,ಉಡುಪಿ ಉದ್ಯಮಿಗಳಾದ ಪುರುಷೋತ್ತಮ ಪಿ ಶೆಟ್ಟಿ, ಜಲೀಲ್ ಸಾಹೇಬ್, ಗೋಪಾಲ ಸಿ ಬ೦ಗೇರ, ಸಾದು ಸಾಲ್ಯಾನ್, ಬನ್ನ೦ಜೆ ವಾರ್ಡಿನ ನಗರಸಭೆಯ ಸದಸ್ಯರಾದ ಟಿ ಜಿ ಹೆಗಡೆ,ಆದರ್ಶ ಆಸ್ಪತ್ರೆ ಉಡುಪಿ ಇದರ ವೈದ್ಯಕೀಯ ನಿರ್ದೇಶಕರಾದ ಡಾ.ಚ೦ದ್ರಶೇಖರ್ ,ಮಲ್ಪೆ ಮೀನುಗಾರರ ಸ೦ಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಟಿ ಕಿದಿಯೂರು ಉಪಸ್ಥಿತರಿದ್ದರು.

No Comments

Leave A Comment