Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ – ಸ್ಥಳದಲ್ಲೇ ನಾಲ್ವರು ಸಾವು

ವಿಜಯಪುರ ತಾಲೂಕಿನ ಹೊನಗನಳ್ಳಿ ಗ್ರಾಮ ಓರ್ವ ಮಹಿಳೆ ಹಾಗೂ ನಾಲ್ವರು ಯುವಕರು, ಗುರುವಾರ ಸಂಜೆ ಬನಶಂಕರಿ ಜಾತ್ರೆಗೆ‌ ಬಂದಿದ್ದರು. ದೇವಿಯ ರಥೋತ್ಸವ ಹಾಗೂ ರಾತ್ರಿ‌ ನಾಟಕ ನೋಡಿಕೊಂಡು, ಸಂಭ್ರಮದ ಜಾತ್ರೆ ಮಾಡಿದ್ದರು.‌ ಗುರುವಾರ ಮಧ್ಯರಾತ್ರಿ ಬಾದಾಯಿಂದ ಹೊರಟಿದ್ದರು. ಶುಕ್ರವಾರ ಬೆಳಗಿನ ಜಾವ ಸುನಗ ಕ್ರಾಸ್ ಬಳಿ ಕಬ್ಬು ತುಂಬಿಕೊಂಡು ಹೊರಟಿದ್ದ‌ ಟ್ರ್ಯಾಕ್ಟರ್ ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು, ಕಬ್ಬಿನ‌ ಟ್ರ್ಯಾಕ್ಟರ್ ನಡಿ ಸಿಲುಕಿದೆ. ಮೃತ ದೇಹಗಳನ್ನು ಹೊರ ತಗೆಯಲು ಜೆಸಿಬಿ ಯಂತ್ರ ಬಳಸಬೇಕಾಯಿತು.

ಮೃತರನ್ನು ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಕಾರು ಚಾಲಕ ಮಲ್ಲು ಪೂಜಾರಿ (24), ಕಲ್ಲಪ್ಪ ಕೌಟಗಿ, (34), ಕಾಮಾಕ್ಷಿ ಬಡಿಗೇರ (35), ತುಕಾರಾಮ್ ತಳೇವಾಡ (30) ಎಂದು ಗುರುತಿಸಲಾಗಿದೆ.
ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ. ಅಮರನಾಥ ರೆಡ್ಡಿ ಭೇಟಿ ನೀಡಿದ್ದು, ಜೆಸಿಬಿ ಮೂಲಕ ಕಬ್ಬು ತೆರವುಗೊಳಿಸಿ ಕಾರು ಹೊರ ತೆಗೆಯಲಾಯಿತು.

No Comments

Leave A Comment