Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನೆಲಕ್ಕೆ ಅಪ್ಪಳಿಸಿದ ಯುದ್ಧ ಕೈದಿಗಳಿಂದ್ದ ರಷ್ಯಾ ಯುದ್ಧ ವಿಮಾನ, 65 ಉಕ್ರೇನ್ ಯುದ್ಧ ಕೈದಿಗಳ ದಾರುಣ ಸಾವು!

ಮಾಸ್ಕೋ: ಯುದ್ಧ ಕೈದಿಗಳಿಂದ್ದ ರಷ್ಯಾ ಯುದ್ಧ ವಿಮಾನವೊಂದು ನೆಲಕ್ಕೆ ಅಪ್ಪಳಿಸಿದ್ದು, ಈ ದುರ್ಘಟನೆಯಲ್ಲಿ ಉಕ್ರೇನ್ ಸುಮಾರು 65 ಮಂದಿ ಯುದ್ಧ ಕೈದಿಗಳ ದಾರುಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

65 ಉಕ್ರೇನ್ ಯುದ್ಧ ಕೈದಿಗಳನ್ನು (65 Ukrainian Prisoners) ಹೊತ್ತೊಯ್ಯುತ್ತಿದ್ದ ಸೇನಾ ಸಾರಿಗೆ ವಿಮಾನವು ಉಕ್ರೇನ್ ಗಡಿಯ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ. ಈ ವಿಮಾನ ಪತನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಐಎಲ್ – 76 ಸೇನಾ ಸಾರಿಗೆ ವಿಮಾನವು ಬೆಲ್ಗೊರೊಡ್ ಪ್ರದೇಶದಲ್ಲಿ ಮಾಸ್ಕೋ ಸ್ಥಳೀಯ ಕಾಲಾಮಾನ ಪ್ರಕಾರ 11 ಗಂಟೆಗೆ ಪತನವಾಯಿತು ಎಂದು ಮಾಸ್ಕೋ ರಕ್ಷಣಾ ಸಚಿವಾಲಯವು ರಷ್ಯಾದ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಉಕ್ರೇನ್ ವಿರುದ್ಧ ರಷ್ಯಾ ಆರೋಪ
ಈ ದುರ್ಘಟನೆಗೆ ಉಕ್ರೇನ್ ಕಾರಣ ಎಂದು ರಷ್ಯಾ ಆರೋಪಿಸಿದೆ. ವಿಮಾನವನ್ನು ಕೈವ್‌ (ಉಕ್ರೇನ್)ನಿಂದ ಹೊಡೆದುರಳಿಸಲಾಗಿದೆ. ಇದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಕ್ಷಿಪಣಿಗಳೇ ಕಾರಣ ಎಂದು ರಷ್ಯಾದ ಸಂಸತ್ತಿನ ಕೆಳಮನೆಯ ಸದಸ್ಯ ವ್ಯಾಚೆಸ್ಲಾವ್ ವೊಲೊಡಿನ್ ಆರೋಪಿಸಿದ್ದಾರೆ. ಅವರು ತಮ್ಮ ಸೈನಿಕರನ್ನು ತಾವೇ ಕೊಂದಿದ್ದಾರೆ. ಮಾನವೀಯ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ನಮ್ಮ ಪೈಲಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈಶಾನ್ಯದಲ್ಲಿರುವ ಕೊರೊಚಾನ್ಸ್ಕಿ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದ್ದು, ವಿಮಾನ ಪತನವಾದ ಸ್ಥಳಕ್ಕೆ ತನಿಖಾ ತಂಡವನ್ನು ಕಳುಹಿಸಲಾಗಿದೆ. ತುರ್ತು ಸೇವೆಗಳನ್ನು ಒದಗಿಸಲಾಗುತ್ತಿದೆ. ನನ್ನ ಪ್ರವಾಸದ ವೇಳಾಪಟ್ಟಿಯನ್ನು ಬದಲಿಸಿಕೊಂಡು, ಘಟನಾ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಗ್ಲಾಡ್ಕೋವ್ ಅವರು ತಿಳಿಸಿದ್ದಾರೆ.

No Comments

Leave A Comment