ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಚಳ್ಳಕೆರೆ ಬಳಿ ನಡೆದ ಕಾರು ಅಪಘಾತಕ್ಕೆ ಬಲಿಯಾದ ನಾಲ್ವರಲ್ಲಿ ಎರಡು ಹಸುಳೆಗಳು ಮತ್ತು ಇನ್ನೊಂದು 2-ವರ್ಷದ ಮಗು!
ಚಿತ್ರದುರ್ಗ: ಬಹಳ ಭೀಕರ ಮತ್ತು ಅತ್ಯಂತ ದಾರುಣ ಅಪಘಾತವಿದು(gory accident). ಇಂದು ಬೆಳಗಿನ ಜಾವ ಜಿಲ್ಲೆಯ ಚಳ್ಳಕೆರೆ (Challakere) ತಾಲ್ಲೂಕಿನ ಸಾಣೆಕೆರೆ ಬಳಿ ಹೆದ್ದಾರಿಯಲ್ಲಿ ಜರುಗಿದ ಅಪಘಾತದಲ್ಲಿ ಮೂರು ಪುಟ್ಟ ಪುಟ್ಟ ಕಂದಮ್ಮಗಳು ಮತ್ತು ಒಬ್ಬ 26 ವರ್ಷದ ಪುರುಷ ಬಲಿಯಾಗಿದ್ದಾರೆ.
ಮೃತ ಮಕ್ಕಳನ್ನು 2- ವರ್ಷದ ಸಿಂಧುಶ್ರೀ, 5-ತಿಂಗಳ ಶಿಶು ಹಯ್ಯಾಳಪ್ಪ ಮತ್ತು 3-ತಿಂಗಳಿನ ಹಸುಳೆ ರಕ್ಷಾ ಎಂದು ಗುರುತಿಸಲಾಗಿದೆ. ಈ ದುರ್ದೈವಿ ಮಕ್ಕಳೊಂದಿಗೆ ಕಾರು ಓಡಿಸುತ್ತಿದ್ದ ಲಿಂಗಪ್ಪ (Lingappa) ಸ್ಥಳದ್ಲಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರರೆಲ್ಲರನ್ನು ಚಳ್ಳಕೆರೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಾರಲ್ಲಿ ಪ್ರಯಾಣಿಸುತ್ತಿದ್ದವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ದಂಡಮ್ಮನಹಳ್ಳಿಯವರು ಎಂದು ಟಿವಿ9 ಕನ್ನಡ ವಾಹಿನಿಯ ಚಿತ್ರದುರ್ಗ ವರದಿಗಾರ ಹೇಳುತ್ತಾರೆ. ಸಂಕ್ರಾಂತಿ ಹಬ್ಬಕ್ಕೆಂದು ಬೆಂಗಳೂರಿನಿಂದ ಊರಿಗೆ ಹೋಗಿದ್ದ ಕುಟುಂಬವು ಕಳೆದ ರಾತ್ರಿ ನಗರಕ್ಕೆ ವಾಪಸ್ಸಾಗುವಾಗ ಅಪಘಾತ ಸಂಭವಿಸಿದೆ. ನಿದ್ದೆ ಮಂಪರಿನಲ್ಲಿದ್ದ ಕಾರು ಓಡಿಸುತ್ತಿದ್ದ ಲಿಂಗಪ್ಪ ಸಾಣೆಕೆರೆ ಬಳಿ ನಿಯಂತ್ರಣ ಕಳೆದುಕೊಂಡ ಕಾರಣ ವಾಹನ ಸೇತುವೆಗೆ ಭಾರೀ ವೇಗದಲ್ಲಿ ಅಪ್ಪಳಿಸಿದೆ.