ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀರಾಮಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ;ದೇವರ ಪ್ರತಿಷ್ಠೆ ಪ್ರಯುಕ್ತ ಹವನ,ಧಾರ್ಮಿಕ ಸಭೆ, ಕರ ಸೇವಕರಿಗೆ ಸನ್ಮಾನ
ಉಡುಪಿ:ಶ್ರೀರಾಮಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಅಯೋಧ್ಯಯಲ್ಲಿ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಸೋಮವಾರ ಬೆಳ್ಳಿಗೆ ಸಾಮೂಹಿಕ ಪ್ರಾರ್ಥನೆ , ಪಂಚಾಮೃತ ಅಭಿಷೇಕ , ಕಲಶಾಭಿಷೇಕ , ರಾಮ ನಾಮ ಹವನ , ಶ್ರೀ ದೇವರಿಗೆ ವಿಶೇಷ ಅಲಂಕಾರ , ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು .
ಧಾರ್ಮಿಕ ಸಭಾ ಕಾರ್ಯಕ್ರಮ: ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಅಧ್ಯಕ್ಷರಾದ ಕೆ ಗೋಕುಲದಾಸ್ ಪೈ ಅಧ್ಯಕ್ಷತೆಯಲ್ಲಿ ನೆಡೆಯಿತು.
ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕರಾದ ರಘುಪತಿ ಭಟ್ , ಮಾಜಿ ಸಚಿವ ಪ್ರಮೋದ್ ಮಧ್ವರಾಜ್ , ಟಿ.ನಾರಾಯಣ ಪೈ ಮಣಿಪಾಲ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಅನಂತಪದ್ಮನಾಭ ಕಿಣೆ , ಪ್ರೊ ಪವನ್ ಕಿರಣ್ ಕೆರೆ ,ಶ್ರೀ ಶಂಕರ ನಾರಾಯಣ ದೇವಸ್ಥಾನದ ಅಧ್ಯಕ್ಷ ಸಾಧು ಸಾಲಿಯಾನ್ , ಆನಂದ ಸುವರ್ಣ , ನಾಗರಾಜ್ ಸುವರ್ಣ , ಗೋಪಾಲ್ ಸಿ ಬಂಗೇರ ಉಪಸ್ಥಿತರಿದ್ದರು ಅಯೋದ್ಯೆಯ ಶ್ರೀ ರಾಮ ಮಂದಿರದ ಕರ ಸೇವಕರಾಗಿ ಸೇವೆಸಲ್ಲಿಸಿದ ನರೇಂದ್ರ ನಾಯಕ ಉಡುಪಿ , ಪ್ರಮೋದ್ ಭಂಡಾರ್ ಕಾರ್ ಮಲ್ಪೆ ,ಜಯಂತ್ ಸಾಲಿಯಾನ್ ಪಡುಕೆರೆ ರವರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಎ೦.ವಾಮನ್ ಭಟ್ ರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ,ಸುನೀಲ್ ಶೆಣೈಪ್ರಸ್ತಾವಿಕವಾಗಿ ಮಾತನಾಡಿದರು.
ಪ್ರಸಿದ್ಧ ಆಕಾಶವಾಣಿ ದೂರದರ್ಶನ ಕಲಾವಿದ ರಾಜೇಶ್ ಪಡಿಯಾರ್ ಮೈಸೂರು ,ರಂಜಿತ್ ಭಟ್ , ವಾಣಿಶ್ರೀ ಪ್ರಮೋದ್ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆಡೆಯಿತು.ರಾತ್ರಿ 7 ಕ್ಕೆ ದೀಪಾರಾಧನೆ , ಹಾಗೂ ಭಜನಾ ಕಾರ್ಯಕ್ರಮ , ಸುಡುಮದ್ದು ಪ್ರದರ್ಶನ ಜರಗಿತು ಶ್ರೀ ರಾಮ ಮಂದಿರದ ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷರು , ಪದಾಧಿಕಾರಿಗಳು , ಜಿ ಎಸ್ ಬಿ ಯುವಕ , ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥರಿದ್ದರು ,ನೂರಾರು ಭಕ್ತರೂ ಉಪಸ್ಥಿತರಿದ್ದರು.