Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಮಂಗಳೂರು: ಕಾಶೀಮಠದಿಂದ ಅಯೋಧ್ಯೆ ಶ್ರೀರಾಮನಿಗೆ ವಿಶೇಷ ಸ್ವರ್ಣ ಹಾರ

ಮಂಗಳೂರು: ಜ 23: ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಕಾಶೀಮಠದ ವತಿಯಿಂದ ಅಯೋಧ್ಯೆ ಶ್ರೀರಾಮದೇವರಿಗೆ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ಚಿನ್ನದಿಂದ ತಯಾರಿಸಿದ ನವರತ್ನಗಳ ಪೇಂಡೆಂಟ್ ಒಳಗೊಂಡಿರುವ 28 ಚಕ್ರಣಿಕಾ ಸಾಲಿಗ್ರಾಮ ದಿಂದ ಅಲಂಕರಿಸಲ್ಪಟ್ಟ ಸ್ವರ್ಣಹಾರವನ್ನು ಸಮರ್ಪಿಸಿದರು.

ಬಹಳ ಆಕರ್ಷಕ ಶೈಲಿಯಲ್ಲಿ ರಚಿಸಲ್ಪಟ್ಟಿರುವ ಈ ಆಭರಣವನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಕಾಶೀಮಠದ ಪರವಾಗಿ ಆಲ್ ಟೆಂಪಲ್ ಅಸೋಸಿಯೇಷನ್ ಅಧ್ಯಕ್ಷರಾದ ಅತುಲ್ ಕುಡ್ವ, ಫೂಜ್ಲಾನಾ ಗ್ರೂಪ್ ನ ಅನಂತ್ ಪೈ, ದೆಹಲಿ ಸಮಾಜದ ಗಣೇಶ್ ಮಲ್ಯ ಹಾಗೂ ಸಮಾಜದ ಪ್ರಮುಖರು ಹಾಗೂ ಗಣ್ಯರು ಸೇರಿ ಹಸ್ತಾಂತರಿಸಿದರು.

No Comments

Leave A Comment