ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಂಬಯಿ, ಜ.23: ಬೃಹನ್ಮುಂಬಯಿಯ ಉಪನಗರದಲ್ಲಿನ ಹೌಶಿ ಶರೀರ್ ಸೌಷ್ಠವ್ ಸೇವಾ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ ಮುಂಬಯಿ ಜೂನಿಯರ್ಸ್ ಬಾಡಿಬಿಲ್ಡಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಜ್ಞಾನೇಶ್ ಸದಾನಂದ ಪೂಜಾರಿ 2023-2024 ಮುಂಬಯಿಶ್ರೀ’ಬಿರುದು ಸಹಿತ ಚಿನ್ನದ ಪದಕಕ್ಕೆ ಭಾಜನರಾಗಿದ್ದು ಆ ಮೂಲಕ ಇದೇ ಜ.28 ರಂದು ರತ್ನಗಿರಿ ಚಿಪ್ಲ್ಲೂನ್‍ನಲ್ಲಿ ನಡೆಯಲಿರುವ `ಮಹಾರಾಷ್ಟ್ರ ಶ್ರೀ’ಗೆ ಸ್ಪರ್ಧೆಗೆ ಆಯ್ಕೆ ಆಗಿರುವರು.
ಉಡುಪಿ ಜಿಲ್ಲೆಯ ನಂದಿಕೂರು ಮೂಲತಃ ಸದಾನಂದ ಕಂಠಪ್ಪ ಪೂಜಾರಿ ಮತ್ತು ಶೋಭಾ ಎಸ್.ಪೂಜಾರಿ ದಂಪತಿ ಸುಪುತನಾಗಿದ್ದು ಘಾಟ್ಕೋಪರ್ ಇಲ್ಲಿ ವಾಸವಾಗಿದ್ದು ಟಾಟಾ ಸಂಸ್ಥೆಯ ಉದ್ಯೋಗಿ ಆಗಿರುವರು. ಜ್ಞಾನೇಶ್ ಪೂಜಾರಿ ಅವರು ಮಿಸ್ಟರ್ ಇಂಡಿಯಾ ಅಂಕುಶ್ ಟೆರ್ವಾಂಕರ್ ಸರ್ ತೇರ್ವಂಕರ್ ಜಿಮ್ಕೋ ಇವರ ಶಿಷ್ಯನಾಗಿದ್ದು ಕುನಾಲ್ ಸಾವಂತ್ ಅವರ ತರಬೇತು ಪಡೆಯುತ್ತಿದ್ದಾರೆ.
ಈ ಹಿಂದೆ ವಿವಿಧೆಡೆ ನಡೆಸಲ್ಪಟ್ಟ ಬಾಡಿಬಿಲ್ಡಿಂಗ್ ಸ್ಪರ್ಧೆಯ 2022-2023ರಲ್ಲಿ ಮುಂಬಯಿ ಕುಮಾರಶ್ರೀ ಪ್ರಥಮ ಸ್ಥಾನ ಚಿನ್ನದ ಪದಕ, ಮಹಾರಾಷ್ಟ್ರ ಕುಮಾರಶ್ರೀ 3ನೇ ಸ್ಥಾನದೊಂದಿಗೆ ಕಂಚಿನ ಪದಕ, ರಾಷ್ಟ್ರೀಯ ಭಾರತ್ ಕುಮಾರ್‍ಶ್ರೀ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕ, 2021-2022ರಲ್ಲಿ ಮುಂಬಯಿ ಉದಯಶ್ರೀ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ, ಮಹಾರಾಷ್ಟ್ರ ಉದಯಶ್ರೀ ದ್ವಿತೀಯ ಸ್ಥಾನ ಕಂಚಿನ ಪದಕ, ರಾಷ್ಟ್ರೀಯ ಭಾರತ್ ಉದಯಶ್ರೀ ಟಾಪ್-5 ಸ್ಥಾನಕ್ಕೆ ಭಾಜನರಾಗಿರುವರು.