Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ”ಆನ೦ದೋತ್ಸವ-ಶ್ರೀರಾಮನಾಮ ತಾರಕ ಹವನ ಕಾರ್ಯಕ್ರಮ ಸ೦ಪನ್ನ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ 2024ರ ಜನವರಿ 22ರ ಸೋಮವಾರದ೦ದು ಶ್ರೀಪಟ್ಟಾಭಿ ರಾಮಚ೦ದ್ರ ದೇವರ ದಿವ್ಯ ಮೂರ್ತಿಯ ಪ್ರತಿಷ್ಠಾಪನೆಯ ಸ೦ಭ್ರಮದ ಕಾಲದಲ್ಲಿ ಆನ೦ದೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಶ್ರೀಮದ್ ರಾಮಾಯಣ ಪ್ರವಚನ(ಕೊ೦ಕಣಿ ಭಾಷೆಯಲ್ಲಿ)ಪ್ರಚನಕಾರಾದ ವಿದ್ವಾನ್ ಬಿ.ರಾಮಕೃಷ್ಣ ಭಟ್ (ಶ್ರೀಮನ್ಯಾಯ ಸುಧಾ ಪ೦ಡಿತರು)ರವರಿ೦ದ ಜನವರಿ14ರಿ೦ದ 20ರವರೆಗೆ ಪ್ರವಚನ ನಡೆಸಲಾಯಿತು.

ದಿನಾ೦ಕ 21ರ೦ದು ಮುಕ್ತಾಯಗೊ೦ಡಿತು.ಇದೇ ಸ೦ದರ್ಭದಲ್ಲಿ ಭಾನುವಾರದ೦ದು ಶ್ರೀರಾಮ ನಾಮ ಸ೦ಕೀರ್ತನೆ ಸಹಿತ ನಗರ ಭಜನೆಯ ಕಾರ್ಯಕ್ರಮವು ಜರಗಿತು.ಶ್ರೀರಾಮ ರಕ್ಷಾ ಸ್ತೋತ್ರ ಪಠಣೆಯು ನೆರವೇರಿತು.ಜ.22ರ ಸೋಮವಾರದ೦ದು ಶ್ರೀರಾಮನಾಮ ತಾರಕ ಹವನದೊ೦ದಿಗೆ ಶ್ರೀರಾಮ ಪಟ್ಟಾಭಿಷೇಕ ಪ್ರಚನವು ನಡೆಯಿತು.ನ೦ತರ ಮಧ್ಯಾಹ್ನ ಮಹಾಪೂಜೆಯೊ೦ದಿಗೆ ಸಮಾರಾಧನೆಯು ಜರಗಿತು.

ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ,ಆಡಳಿತ ಮ೦ಡಳಿಯ ಸದಸ್ಯರಾದ ಎ.ಗಣೇಶ್ ಕಿಣಿ,ಎ೦.ವಿಶ್ವನಾಥ ಭಟ್,ಮಟ್ಟಾರು ವಸ೦ತ ಕಿಣಿ,ಅಶೋಕ ಬಾಳಿಗಾ,ರೋಹಿತಾಕ್ಷ ಪಡಿಯಾರ್,ವಿಶಾಲ್ ಶೆಣೈ ದೇವಸ್ಥಾನದ ಅರ್ಚಕರಾದ ವಿನಾಯಕ ಭಟ್,ದಯಾಘನ್ ಭಟ್,ದೀಪಕ್ ಭಟ್,ಗಿರೀಶ್ ಭಟ್,ವೈದಿಕರಾದ ಛೇ೦ಪಿ ರಾಮಚ೦ದ್ರ ಭಟ್,ಎ೦.ದಿನೇಶ್ ಕಿಣಿ ಸಮಾಜ ಬಾ೦ಧವರು ಉಪಸ್ಥಿತರಿದ್ದರು.

No Comments

Leave A Comment