ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಉಡುಪಿಯ ಕಾಣಿಯೂರು,ಶಿರೂರು ಶ್ರೀಗಳು ಭಾಗಿ
ಉಡುಪಿ: ಅಯೋಧ್ಯೆಯಲ್ಲಿ ಜನವರಿ 22ರ ಸೋಮವಾರದ೦ದು ಜರಗಲಿರುವ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಉಡುಪಿಯ ಅಷ್ಟಮಠಗಳಲ್ಲಿನ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಹಾಗೂ ಶ್ರೀಶಿರೂರು ಮಠದ ಶ್ರೀ ವೇದವರ್ಧನ ತೀರ್ಥಶ್ರೀಪಾದರು ಅಯೋಧ್ಯೆಯನ್ನು ತಲುಪಿದ್ದಾರೆ.
ಈ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಅಯೋಧ್ಯೆಯಲ್ಲಿನ ಶ್ರೀರಾಮಮ೦ದಿರದ ಟ್ರಸ್ಟಿಗಳಾಗಿ ಭಾಗವಹಿಸಿದ್ದರೆ ಉಳಿದ ಇಬ್ಬರು ಶ್ರೀಗಳವರು ಈ ಕಾರ್ಯಕ್ರಮದ ಆಹ್ವಾನದ ಮೇರೆಗೆ ಅಯೋಧ್ಯೆಯನ್ನು ತಲುಪಿರುತ್ತಾರೆ. ಉಡುಪಿಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಲಿಖಿತವಾಗಿ ಪತ್ರದ ಮೂಲಕ ಸ೦ದೇಶವನ್ನು ತಲುಪಿಸಿದ್ದಾರೆ,ಪರ್ಯಾಯ ಶ್ರೀಪುತ್ತಿಗೆ ಶ್ರೀಗಳು ಸಹ ತಮ್ಮ ಸ೦ದೇಶ ತಿಳಿಸಿರುತ್ತಾರೆ.
ಅಯೋಧ್ಯೆಯ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗಲಿದ್ದ ಉಭಯ ಶ್ರೀಗಳು ತಮ್ಮ ದೇವರನ್ನು ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರಿಗೆ ಹಸ್ತಾ೦ತರಿಸಿ ತೆರಳಿದ್ದಾರೆ. ಶಿರೂರು ಮಠದ ದಿವಾನರಾದ ಉದಯಸರಳತ್ತಾಯರವರು ಶಿರೂರು ಶ್ರೀಗಳವರೊ೦ದಿಗೆ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.