ಪಣಿಯಾಡಿ ಶ್ರೀ ಅನಂತ ಪದ್ಮನಾಭ ಸನ್ನಿಧಿ ರಾಮೋತ್ಸವದ ಅ೦ಗವಾಗಿ ದೀಪಾರಾಧನೆ, 1008 ಬಾರಿ ಶ್ರೀ ರಾಮ್ ಜಯರಾಮ್ ಜಯ ಜಯರಾಮ್ ಪಠಣ
ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಟೆ ಮಹೋತ್ಸವದ ಸಂಧರ್ಭದಲ್ಲಿ,ಈ ಪವಿತ್ರ ಚಾರಿತ್ರಿಕ ಘಟನೆ ಸಮಸ್ತ ಹಿಂದು ಸಮಾಜ ಸಂಭ್ರಮಿಸುವ ಅಂಗವಾಗಿ ದಿನಾಂಕ 22.1.2024 ನೇ ಸೋಮವಾರ ಸಂಜೆ 6.30ಕ್ಕೆ ಪಣಿಯಾಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ದೀಪಾರಾಧನೆ,ಸುಡುಮದ್ದು ಪ್ರದರ್ಶನ,ಹಾಲು ಪಾಯಸ ಸೇವೆ ಕಾರ್ಯಕ್ರಮ ನಡೆಯಲಿದೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮನೆಮಂದಿಯೊಂದಿಗೆ ಭಾಗವಹಿಸಿ ಶ್ರೀ ರಾಮನ ದೀಪ ಬೆಳಗಿ, ಅನುಗ್ರಹದ ಮಂತ್ರಾಕ್ಷತೆ ಪಡೆದು ಶ್ರೀ ಅನಂತ ಪದ್ಮನಾಭ/ಶ್ರೀ ರಾಮ ಶ್ರೀ ಆಂಜನೇಯರ ಪರಮ ಅನುಗ್ರಹಕ್ಕೆ ಪಾತ್ರರಾಗಿರಿ.
ಸಂಜೆ 5.00ಕ್ಕೆ ರಾಮ ಭಜನಾ ಝಲಕ್ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ಭಜನಾ ಮಂಡಳಿಯ ಮಾತೆಯರು ಹಾಗೂ ಮಹನೀಯರಿಂದ ಸಂಜೆ 6.30ಕ್ಕೆ ಸಾಮೂಹಿಕವಾಗಿ 1008 ಬಾರಿ ಶ್ರೀ ರಾಮ್ ಜಯರಾಮ್ ಜಯ ಜಯರಾಮ್ ಪಠಣ.
7.15 ಕ್ಕೆ ರಾತ್ರಿ ಪೂಜೆ,7.30 ಕ್ಕೆ ಶ್ರೀ ರಾಮ ದೇವರಿಗೆ ದೀಪಾರಾಧನೆ ಸಹಿತ ಮಹಾ ಮಂಗಳಾರತಿ,7.45 ಕ್ಕೆ ಫಲ ಮಂತ್ರಾಕ್ಷತೆ,8.00 ಕ್ಕೆ ಹಾಲು ಪಾಯಸ ಸಹಿತ ಪ್ರಸಾದ ವಿತರಣೆ.