ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಾಮೋತ್ಸವ
ಉಡುಪಿ:ಪ್ರಭು ಶ್ರೀ ರಾಮಚಂದ್ರ ದೇವರ ಜನ್ಮಭೂಮಿ ಅಯೋಧ್ಯಾ ನಗರಿಯಲ್ಲಿ ನೂತನ ನಿರ್ಮಿತ ದಿವ್ಯ ಭವ್ಯ ಮಂದಿರದಲ್ಲಿ ಶ್ರೀ ರಾಮ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಇದೇ ಬರುವ ತಾ 22-01-2024 ರ ಸೋಮವಾರ ಈ ಕೆಳಗಿನ ಧಾರ್ಮಿಕ ಕಾರ್ಯಕ್ರಮಗಳು ಅತೀ ವಿಜೃಂಭಣೆಯಿಂದ ಜರಗಲಿವೆ.
ಬೆಳಗ್ಗೆ 8.00 ರಿಂದ ರಾತ್ರಿ 7.00 ರ ತನಕ ಶ್ರೀ ರಾಮ ಜಯ ರಾಮ ಜಯ ಜಯ ರಾಮ ತಾರಕ ಮಂತ್ರ ಪಠಣೆ.
ರಾತ್ರಿ 7.00 ಕ್ಕೆ ಭಜನಾ ಕಾರ್ಯಕ್ರಮ ಹಾಗೂ ಪ್ರಭು ಶ್ರೀ ರಾಮಚಂದ್ರ ದೇವರ ಭಾವಚಿತ್ರವನ್ನು ಪಲ್ಲಕ್ಕಿ ಮೆರವಣಿಗೆ ಹಾಗೂ ಪೇಟೆ ಉತ್ಸವ. ತಮ್ಮ ತಮ್ಮ ಮನೆಯ ಮುಂದೆ ಆರತಿ ಮಾಡುವ ಅವಕಾಶವಿರುತ್ತದೆ.
ರಾತ್ರಿ 8.00 ಕ್ಕೆ ಸಹಸ್ರ ದೀಪಗಳನ್ನು ಬೆಳಗಿಸುವುದು, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಭೋಜನ ಪ್ರಸಾದ.
ಭಜಕರೆಲ್ಲರೂ ಈ ಪುಣ್ಯಪ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಭು ಶ್ರೀ ರಾಮಚಂದ್ರ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.